ಲೋಕದರ್ಶನ ವರದಿ
ವಿಜಯಪುರ 24: ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ತಾಲೂಕಗಳ ತಹಶಿಲ್ದಾರರುಗಳಿಗೆ ವಾಹನಗಳನ್ನು ಹಸ್ತಾಂತರಿಸಿ ವಾಹನಗಳಿಗೆ ಹಸಿರು ನಿಶಾನೆ ತೋರುವ ಮುಖಾಂತರ ಚಾಲನೆ ನೀಡಿದರು.
ಚಡಚಣ, ನಿಡಗುಂದಿ, ಕೋಲಾರ, ತಿಕೋಟಾ, ಬಬಲೇಶ್ವರ, ತಾಳಿಕೋಟೆ, ದೇ ಹಿಪ್ಪರಗಿ ಈ ಒಟ್ಟು 7 ತಾಲೂಕಗಳ ತಶಿಲ್ದಾರ ಅವರಿಗೆ ವಾಹನಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾಯ9ನಿವಾ9ಹಣಾಧಿಕಾರಿ ಶ್ರೀ ಗೋವಿಂದ ರೆಡ್ಡಿ, ಅಪರ್ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಎಚ್, ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ್ರು ಸೇರಿದಂತೆ ಮತ್ತಿತರರು ಉಪಸ್ಥಿತರಿದರು.