ವಿಜಯಪುರ: ಟಿವಿ ನಿರೂಪಕರಾಗುವುದು ಸುಲಭದ ಮಾತಲ್ಲ. ಕೇವಲ ಓದುಲು ಬಂದರೆ ನಿರೂಪಣೆ ಮಾಡಲು ಸಾಧ್ಯವಿಲ್ಲ. ನಿರೂಪಣಾ ಕೌಶಲ್ಯದ ಜೊತೆಗೆ ಸಾಮಾನ್ಯ ಜ್ಞಾನದ ಬಗೆಗೆ ನಮಗೆ ಅರಿವಿರಬೇಕು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಎಸ್. ಬಾಲಸುಬ್ರಮಣ್ಯ ಹೇಳಿದರು.
ನಗರದ ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನದ 'ಟಿವಿ ನಿರೂಪಣಾ ಕೌಶಲ್ಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಟಿವಿ ನಿರೂಪಣೆ ಎಂದರೆ ಅದು ಬಹುಮುಖ ಸಾಮಥ್ರ್ಯದ ಕೆಲಸ. ಓದುವ, ಬರೆಯುವ, ಸಂವಹನ ನಡೆಸುವ ಹೀಗೆ ಎಲ್ಲ ಕೌಶಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ನಿರೂಪಕರಾಗಲು ಸಾಧ್ಯ. ಟಿವಿ ಮಾಧ್ಯಮಕ್ಕೆ ಹೋಗುವ ಮುನ್ನ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿನಿಯರು ಪಡೆದಿರಬೇಕು. ಯಾವುದೇ ತಯಾರಿ ಇಲ್ಲದೇ ಮಾಧ್ಯಮ ಕ್ಷೇತ್ರಕ್ಕೆ ಕಾಲಿಡಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದಂತಹ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೋ. ಪಿ.ಜಿ.ತಡಸದ ಮಾತನಾಡಿ, ಹಳೆಯ ಕಾಲದಲ್ಲಿ ನಿರೂಪಣೆಯ ಶೈಲಿಯೂ ಶಾಸ್ತ್ರೀಯವಾಗಿತ್ತು. ಪತ್ರಿಯೊಬ್ಬ ನಿರೂಪಕರು ತನ್ನದೇ ಶೈಲಿಯ ಜೊತೆಗೆ ಕೆಲವು ಇತಿ-ಮೀತಿಗಳನ್ನು ಹೊಂದಿರುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ ಕಾಲ ಬದಲಾದಂತೆ ಶೈಲಿಯೂ ಬದಲಾಗಿದೆ. ಇನ್ನು ಕನರ್ಾಟಕದಲ್ಲಿಯೂ ಸಾಕಷ್ಟು ಅತ್ಯುತ್ತಮ ನಿರೂಪಕಿಯರನ್ನು ನಾವು ಕಾಣಬಹುದು ಅದರಲ್ಲಿ ಅಪರ್ನಾ, ಗೀತಾ ಸಿಹಿಕಹಿ, ಈಗ ಅತೀ ಮೇಲಿನ ಸ್ಥಾನದಲ್ಲಿರುವ ಅನುಶ್ರೀ ಅವರನ್ನು ಸಹ ನಾವು ಕಾಣಬಹುದು. ಭಾಷೆ ನಮಗೆಷ್ಟು ಶುದ್ಧವಾಗಿ ಬರುತ್ತಿರುತ್ತದೆ ಅಷ್ಟು ಸುಂದರವಾಗಿ ನಾವು ನಿರೂಪಣೆಯನ್ನು ಮಾಡಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಯ ಪ್ರಾಯೋಗಿಕ ಪತ್ರಿಕೆ ಮಹಿಳಾ ಧ್ವನಿ, ಅಕ್ಕ ಟಿ.ವಿ ಹಾಗೂ ಅಕ್ಕ ನ್ಯೂಸ್ ವೆಬ್ ಪೋರ್ಟಲ್ನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಬೋಧಕ ಮತ್ತು ಬೋಧಕೆತರ ಸಿಬ್ಬಂದಿ, ರಾಜ್ಯದ ವಿವಿಧ ಕಾಲೇಜು ವಿದ್ಯಾರ್ಥಿನಿಯರು ಹಾಗೂ ವಿಭಾಗ ವಿಧ್ಯಾರ್ಥಿನಿಯರು ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನಾ ಕೋಲಾರ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಸಂದೀಪ ಪ್ರಾಸ್ತಾವಿಕ ಮಾತನಾಡಿದರು. ಸಂಶೋಧನಾ ಸಂಯೋಜಕಿ ದೀಪಾ ತಟ್ಟಿಮನಿ ಅತಿಥಿಗಳ ಪರಿಚಯಿಸಿದರು. ಸಂಶೋಧನಾ ವಿದ್ಯಾರ್ಥಿನಿ ಜ್ಞಾನಜೋತಿ ಚಾಂದಕವಠೆ ನಿರೂಪಿಸಿದರು. ಸಹಾಯಕ ಸಂಶೋಧಕಿ ಸೃಷ್ಟಿ ಜವಳಕರ ವಂದಿಸಿದರು.