ಲೋಕದರ್ಶನ ವರದಿ
ವಿಜಯಪುರ 20: ಓದಿದವನು ಮಾತ್ರ ಬ್ರಹ್ಮನಲ್ಲ ಓದದದಿದ್ದರು ಸಹ ತ್ರಿಪದಿಯ ಬ್ರಹ್ಮನಾದವನು ಸರ್ವಜ್ಞನಾಗಿದ್ದು, ಜೀವನದ ಅನುಭವಗಳನ್ನು ಅವರು ತ್ರಿಪದಿಯ ಮೂಲಕ ಜಗತ್ತಿಗೆ ಸಾರಿದ್ದಾರೆ. ಅವರ ವಿಚಾರಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಬಾಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವಜ್ಞರು ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತರಾಗದೆ ವಿಶ್ವಕ್ಕೆ ಜ್ಞಾನದ ಬೆಳಕನ್ನು ಚೆಲ್ಲಿದ್ದಾರೆ. ಅಂತವರ ನುಡಿಗಳ ತತ್ವವನ್ನು ತಿಳಿದುಕೊಂಡು ನಿತ್ಯ ಜೀವನದಲ್ಲಿ ಅಳಡಿಕೊಳ್ಳಬೇಕು ಎಂದು ಅವರು ಹೇಳಿದರು.
ಸರ್ವರೊಳಗೊಂದು ನುಡಿ ಕಲಿತು ಸರ್ವಜ್ಞ ಎಂದು ಕರೆಸಿಕೊಂಡರು. ಪ್ರತಿ ವ್ಯಕ್ತಿಯು ಎಲ್ಲಿ ಜ್ಞಾನ ಸಿಗುತ್ತದೆಯೋ, ಅಲ್ಲಿನ ವಿಚಾರಗಳನ್ನು ಪಡೆದುಕೊಳ್ಳಿ. ಶರಣರ ವಚನಗಳನ್ನು ನಿತ್ಯ ಬದುಕಿನಲ್ಲಿ ಇಂದಿನ ವಿದ್ಯಾಥರ್ಿಗಳು ಅಳವಡಿಸಿಕೊಂಡು ಸತತ ಅಭ್ಯಾಸ ಮಾಡುವ ಮೂಲಕ ಸಾಧನೆಯ ಶಿಖರವನ್ನೇರಬಹುದು ಎಂದು ಜಿಲ್ಲಾಧಿಕಾರಿಗಳು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಹಿರಿಯರಲ್ಲಿ ಅನುಭವ ಇರುತ್ತದೆ ಅವರಲ್ಲಿ ಜ್ಞಾನದ ಅಮೃತ ಅಡಗಿರುತ್ತದೆ, ಅಂತಹವರಿಂದ ಜೀವನದ ಪಾಠಗಳನ್ನು ಇಂದಿನ ಮಕ್ಕಳು ಕಲಿಯಬೇಕಾಗಿದೆ. ಅದರಂತೆ ಅನುಭವದ ಮೂಲಕ ಸಾಮಾನ್ಯರು ಅರ್ಥಿಸಿಕೊಳ್ಳಲು ಮೂರು ಸಾಲುಗಳಲ್ಲಿಯೇ ವಚನಗಳನ್ನು ಹೇಳಿದವರು ಸಂತ ಕವಿ ಸರ್ವಜ್ಞ ಅವರ ವಚನಗಳ ಸಂದೇಶವನ್ನು ಪ್ರತಿಯೊಬ್ಬರು ಅರಿತುಕೊಂಡು ಉತ್ತಮ ಜೀವನ ನಡೆಸಬೇಕಾಗಿದೆ ಎಂದು ಅವರು ಹೇಳಿದರು.
ಮಾತಿನಿಮ್ಮ ನಗೆನುಡಿಯೂ, ಮಾತಿನಿಮ್ಮ ಹಗೆ ಕೊಲೆಯೂ, ಮಾತಿನಿಮ್ಮ ಸರ್ವಸಂಪದವು ಸರ್ವಜ್ಞನ ಈ ಒಂದು ವಚನ ಅರ್ಥ ಅರಿತರೆ ಇಡೀ ಕುಟುಂಬ ಜೀವನವನ್ನೇ ಬದಲಾಯಿಸುತ್ತದೆ. ಹಾಗಾಗಿ ಪ್ರತಿಯೊಬ್ಬರು ಅವರ ತ್ರಿಪದಿಗಳ ಅಳವಡಿಸಿಕೊಂಡು ಒಬ್ಬರಿಗೊಬ್ಬರು ಅರಿತುಕೊಂಡು ಬಾಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮಿ ತೇರದಾಳ ಮಠ ಸರ್ವಜ್ಞನನ ವಚನಗಳಿಗೆ ಭರತನಾಟ್ಯ ಮಾಡಿ ನೋಡುಗರ ಮನ ತಣಿಸಿದರು.
ಕೆಎಎಸ್ ಅಧಿಕಾರಿಯಾದ ಎಸ್.ಕೆ ಭಾಗ್ಯಶ್ರೀ ಮತ್ತು ಕರವೇ ಹೋರಾಟಗಾರರಾದ ಪ್ರಕಾಶ ಕುಂಬಾರ ಅವರನ್ನು ಸನ್ಮಾನಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಕೆ.ಸಿ ಲಕ್ಷ್ಮೀನಾರಾಯಣ, ಗೋಲಗುಂಬಜ ನಗರ ಪೊಲೀಸ್ ಠಾಣೆಯ ಸಿಪಿಐ ಬಸವರಾಜ ಕೆ. ಮೂಕರ್ತಿಹಾಳ, ದೈಹಿಕ ಶಿಕ್ಷಣಾ ಇಲಾಖೆ ಅಧಿಕಾರಿ ಗಂಗಶೆಟ್ಟಿ, ಜಿಲ್ಲಾ ಪಂಚಾಯತಿಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ಶ್ರೀಶೈಲ ಕುಂಬಾರ, ಎಮ್.ಎಮ್.ಬಾನ್ಸಿ, ಸಿದ್ದಮ್ಮ ಕುಂಬಾರ ಸುನಂದಾ ಕುಂಬಾರ, ಎಸ್.ಎಸ್ ಕುಂಬಾರ ಸೇರಿದಂತೆ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಪುಷ್ಪಾ ಕುಲಕರ್ಣಿ ನಾಡಗೀತೆ ಹಾಡಿ ಸುಗಮ ಸಂಗೀತ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಹೇಶ ಪೋತದಾರ ಸ್ವಾಗತಿಸಿದರು. ಎಚ್.ಎ ಮಮದಾಪುರ ನಿರೂಪಿಸಿ, ವಂದಿಸಿದರು.