ವಿಜಯಪುರ: ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ 2,92 ಕೋಟಿ ರೂ. ನಿವ್ವಳ ಲಾಭ

ಲೋಕದರ್ಶನ ವರದಿ

ವಿಜಯಪುರ 10: ವಿಜಯಪುರ-ಬಾಗಲಕೋಟ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವು 2018-19ನೇ ಸಾಲಿನಲ್ಲಿ 250.62 ಕೋಟಿ ರೂ. ವಹಿವಾಟು ನಡೆಸಿ 2.92 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಒಕ್ಕೂಟದ ನಿದೇರ್ಶಕ ಶ್ರೀಶೈಲಗೌಡ ಪಾಟೀಲ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದ ವಹಿವಾಟು ಕಳೆದ ವರ್ಷಕ್ಕಿಂತ ಶೇ.14.5 ರಷ್ಟು ಹೆಚ್ಚಳವಾಗಿದೆ. ವ್ಯಾಪಾರದಿಂದ 27.07 ಕೋಟಿ ರೂ. ಲಾಭಗಳಿಸಿದ್ದು, 2.92 ಕೋಟಿ ರೂ. ನಿವ್ವಳ ಲಾಭವಾಗಿದೆ ಎಂದರು.

ಒಕ್ಕೂಟಕ್ಕೆ ಐಎಸ್ಒ 22000 ಗುಣಮಟ್ಟದ ಪ್ರಮಾಣಪತ್ರ, ಪರಿಸರ, ಆರೋಗ್ಯ ಮತ್ತು ಸುರಕ್ಷತೆಗಾಗಿ ಎಕ್ಸಲೆನ್ಸ್ ಅವಾಡರ್್ ದೊರೆತಿದೆ. ಉತ್ತರ ಕನರ್ಾಟಕದಲ್ಲಿಯೇ ಪ್ರಪ್ರಥಮವಾಗಿ ಗುಣಮಟ್ಟಕ್ಕಾಗಿ ಕ್ವಾಲಿಟಿ ಮಾಕರ್್ ಪ್ರಮಾಣಪತ್ರ ಕೂಡ ಸಿಕ್ಕಿದೆ. ಪ್ರಗತಿಯಲ್ಲಿ ಈ ಒಕ್ಕೂಟವು ರಾಜ್ಯದಲ್ಲಿಯೇ ಎರಡನೇ ಸ್ತಾನದಲ್ಲಿದೆ ಎಂದು ಹೇಳಿದರು. 

ಬರದ ಹಿನ್ನೆಲೆಯಲ್ಲಿ ಅವಳಿ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗಾಗಿ 3 ಕೋಟಿ ರೂ. ನೆರವು ನೀಡಲಾಗಿದೆ. ಹಾಲು ಖರೀದಿ ದರದಲ್ಲಿ 1 ರೂ. ಹೆಚ್ಚಿಸಲಾಗಿದೆ. ಪ್ರತಿ 50 ಕೆ.ಜಿ ಚೀಲ ಪಶು ಆಹಾರಕ್ಕೆ 100 ರೂ. ರಿಯಾಯ್ತಿ ನೀಡಲಾಗಿದೆ. ಏಪ್ರಿಲ್ನಿಂದಲೇ ಹಾಲು ಉತ್ಪಾದಕರ ಖಾತೆಗೆ ಸಕರ್ಾರದಿಂದ ನೇರವಾಗಿ ಅವರ ಖಾತೆಗೆ ಹಣ ಜಮೆಮಾಡುವ ಯೋಜನೆಯನ್ನು ಸಕರ್ಾರ ಜಾರಿಗೊಳಿಸಿದೆ ಎಂದರು.

     ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರಸ್ತುತ 459 ಹಾಲು ಉತ್ಪಾದನೆ ಸಂಘಗಳಿದ್ದು, ಒಟ್ಟು 67,153  ಸದಸ್ಯರು ಪ್ರತಿದಿನ ಹಾಲು ಪೂರೈಸುತ್ತಿದ್ದಾರೆ. ಪ್ರತಿ ದಿನ 64.7 ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. 8,091 ಕೆಜಿ ಮೊಸರು ಉತ್ಪಾದಿಸಲಾಗುತ್ತಿದೆ.  3 ಸಾವಿರ ಲೀಟರ್ ಹಾಲಿನಿಂದ ಉತ್ಪನ್ನಗಳ ತಯಾರಿಕೆ ಮಾಡಲಾಗುತ್ತಿದೆ. 65 ಸಾವಿರ ಲೀಟರ್ ಬಲ್ಕ್ ಹಾಲು ಮಾರಾಟವಾಗುತ್ತಿದ್ದು, ಕ್ಷೀರಭಾಗ್ಯ ಯೋಜನೆಯಡಿ 65 ಸಾವಿರ ಲೀಟರ್ ಹಾಲು ನೀಡಲಾಗುತ್ತಿದೆ. 824 ಹಾಲು ವಿತರಕರಿದ್ದು, 16 ಕ್ಷೀರ ಮಳಿಗೆ ಹೊಂದಿದೆ. 68 ನಂದಿನಿ ಪ್ರಾಂಚೈಸಿ ಹೊಂದಿದ್ದು, ಮಹಾರಾಷ್ಟ್ರದ ಸೋಲಾಪುರ, ಅಕ್ಕಲಕೋಟ ಮತ್ತು ಉಸ್ಮಾನಾಬಾದ್ ಮಾರುಕಟ್ಟೆಗೆ ಪ್ರತಿ ದಿನ 10 ಸಾವಿರ ಲೀ. ಹಾಲು ಮಾರಾಟ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

    ಪ್ರತಿ ತಿಂಗಳು 8 ಮೆಟ್ರಿಕ್ ಟನ್ ತುಪ್ಪ ಮಾರಾಟ ಮಾಡಲಾಗುತ್ತಿದೆ. 11 ಮೆಟ್ರಿಕ್ ಟನ್ನಂದಿನಿ ಉತ್ಪನ್ನಗಳಾದ ಪೇಡಾ, ಮಸಾಲಾ ಮಜ್ಜಿಗೆ, ಲಸ್ಸಿ, ಬೆಣ್ಣೆ, ಸುವಾಸಿತ ಹಾಲು, ಜಾಮೂನ್ ಮಿಕ್ಸ್, ಜಾಮೂನ್, ರಸಗುಲ್ಲಾ, ಪನ್ನೀರ್, ಧಾರವಾಡ ಪೇಡಾ, ಬೆಳಗಾವಿ ಕುಂದಾ, ಐಸ್ಕ್ರೀಂ, ಹಾಲಿನ ಪುಡಿ ಹಾಗೂ ಇತರ ಸಿಹಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದರು. 

   ಒಕ್ಕೂಟವು ಮುಂದಿನ ಐದು ವರ್ಷದಲ್ಲಿ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಸಂಘ 3 ಲಕ್ಷ ಲೀಟರ್ ಹಾಲು ಉತ್ಪಾದನೆ, 1,5 ಲಕ್ಷ ಲೀಟರ ಹಾಲು ಮಾರಾಟ250 ಸಂಘಗಳನ್ನು ಸ್ಥಾಪನೆ ಮಾಡುವ  ಗುರಿ ಹೊಂದಿದೆ. ಪ್ರಸ್ತುತ 1.75 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಇನ್ನಷ್ಟು ಹೆಚ್ಚಳಗೊಳಿಸುವ ಯೋಜನೆ ರೂಪಿಸಲಾಗಿದೆ. 

   ಬಾಗಲಕೋಟೆ ಜಿಲ್ಲೆಯಲ್ಲಿ 1 ಲಕ್ಷ ಲೀಟರ್ ಸಾಮಥ್ರ್ಯದ 22 ಕೋಟಿ ರೂ. ವೆಚ್ಚದಲ್ಲಿ ಡೇರಿ ನಿಮರ್ಾಣ ಮಾಡುವ ಯೋಜನೆ ರೂಪಿಸಲಾಗಿದೆ. ಈಗಾಗಲೇ 9.30 ಕೋಟಿ ರೂ. ವೆಚ್ಚದ ಸಿವಿಲ್ ಕಾಮಗಾರಿ ಪೂಣ್ವಾಗಿದೆ., ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ಕಾಮಗಾರಿ ಟೆಂಡರ್ ಆಗಿದ್ದು, ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಒಕ್ಕೂಟದಿಂದ  40 ಲಕ್ಷ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಪ್ಯಾಂಕಿಂಗ್ ಯಂತ್ರ ಅಳವಡಿಕೆ, ಜಮಖಂಡಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ 10 ಮೆಟ್ರಿಕ್ ಟನ್ ಸಾಮಥ್ರ್ಯದ ಹಾಲಿನ ಪುಡಿ ತಯಾರಿಕೆ ಘಟಕ ಸ್ಥಾಪನೆ, ವಿಜಯಪುರ ಡೇರಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ರೆಫ್ರಿಜಿರೇಷನ್ ವ್ಯವಸ್ಥೆ ಬಲವರ್ಧನೆ ಮತ್ತು ಕೋಲ್ಡ್ ರೂಂ ವಿಸ್ತರಣೆ, 5 ಸಾವಿರ ಲೀ. ಸಾಮಥ್ರ್ಯದ ಐಸ್ಕ್ರಿಂ ತಯಾರಿಕೆ ಘಟಕ ಸ್ಥಾಪನೆ, ಪರಿಸರ ಸಂರಕ್ಷಣೆಗಾಗಿ ವಿಜಯಪುರ ಡೇರಿಯ ಖುಲ್ಲಾ ಜೆಗಯಲ್ಲಿ 500 ಔಷಧೀಯ ಹಾಗೂ ಇತರೆ ಗಿಡ-ಮರ ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. 

   ಸಂಘದ ನಿದರ್ೇಶಕರಾದ ಸಿದ್ದಣ್ಣ ಕಡಪಟ್ಟಿ, ಸಂಗಣ್ಣ ಹಂಡಿ, ಮಹಾದೇವ ಹನಗಂಡಿ, ಸಂಜಯ ತಳೇವಾಡ, ಶ್ರೀಮತಿ ಅಶ್ವಿನಿ ಹಳ್ಳೂರ, ವ್ಯವಸ್ಥಾಪಕ ನಿದರ್ೇಶಕ ಡಿ.ಅಶೋಕ ಹಾಗೂ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.