ವಿಜಯಪುರ: ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಬೇಸಿಗೆ ಶಿಬಿರಗಳು ಸಹಕಾರಿ: ಪ್ರೊ.ಅಂಬಲಿ

ಲೋಕದರ್ಶನ ವರದಿ

ವಿಜಯಪುರ 14: "ಕೇವಲ ಮೋಬೈಲ್-ಕಂಪ್ಯುಟರ್ ಬಳಕೆಯೇ ಹೆಚ್ಚಾಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಲ್ಲಿ ನಮ್ಮ ಸಂಸ್ಕೃತಿ-ಆಚಾರ-ವಿಚಾರ-ಆಟಗಳ ಕುರಿತು  ಆಸಕ್ತಿ ಮೂಡಿಸುವಲ್ಲಿ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಬಿಎಲ್ಡಿಇ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ ಜಿ ಆರ್ ಅಂಬಲಿ ಹೇಳಿದರು.

ಅವರು ಇಲ್ಲಿಯ  ಗೋಡಬೊಲೆ ಮಾಳಾ ಬಡಾವಣೆಯ ಶಿಕ್ಷಣ ಚೇತನ ಸಂಸ್ಥೆ  ವತಿಯಿಂದ ನಗರದ ಶ್ರೀ ತ್ರಿವಿಕ್ರಮ ದೇವಸ್ಥಾನದಲ್ಲಿ   ನಿನ್ನೆ  ಮಕ್ಕಳಿಗಾಗಿ ಆರಂಭಗೊಂಡ  ಹತ್ತು ದಿನಗಳ ಕಾಲದ ಉಚಿತ  ಬೇಸಿಗೆ ಶಿಬಿರವನ್ನು  ಉದ್ಘಾಟಿಸಿ ಮಾತನಾಡಿದರು.

"ಮಕ್ಕಳು ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಂಡು, ಉತ್ತಮ ಜ್ಞಾನವನ್ನು ಹೊಂದುವದು ಅವಶ್ಯವಾಗಿದೆ" "ಬೇಸಿಗೆ ಅವಧಿಯಲ್ಲಿ ಮಕ್ಕಳಲ್ಲಿ ಹೊಸ ಹೊಸ ವಿಚಾರಗಳನ್ನು ತುಂಬಲು ಕಳೆದ ಹತ್ತು ವರ್ಷಗಳಿಂದ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿರುವ ಶಿಕ್ಷಣ ಚೇತನ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ" ಎಂದರು.

ವೇದಮೂತರ್ಿ ವಿಷ್ಣುಪಂತ ಉಪಾಧ್ಯೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶಿಬಿರದ ಸದುಪಯೋಗ ಪಡೆದುಕೊಂಡು ದೇಶದ ಸತ್ಪ್ರಜೆಗಳಾಗುವಂತೆ ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ಅಧ್ಯಕ್ಷ ಪ್ರೊ. ಅನಂತ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದ ಕಾರ್ಯಪಟ್ಟಿ ವಿವರಿಸಿದರಲ್ಲದೇ ಸಂಸ್ಥೆಯ ನಡೆದು ಬಂದ ದಾರಿ ತಿಳಿಸಿದರು.  

ಶಿಬಿರದಲ್ಲಿ ಹತ್ತು ದಿನಗಳ ಕಾಲ ಉಚಿತವಾಗಿ  ಸಂಸ್ಕೃತ ಸಂಭಾಷಣೆ,  ಹಿಂದಿ, ಇಂಗ್ಲéೀಷ  ಕನ್ನಡ ಸಂಭಾಷಣಾ  ಹಾಗೂ ವ್ಯಾಕರಣಗಳ ಜೊತೆಗೆ  ಚಿತ್ರಕಲೆ, ಸಂಗೀತ,  ಯೋಗ, ನಾಟಕ, ಅಣುಕುಗಳು, ಸಾಮಾನ್ಯ ಜ್ಞಾನ, ಮನರಂಜನಾ ವಿವಿಧ ಆಟ ಪಾಠಗಳನ್ನು ನುರಿತ ತಜ್ಞ  ಶಿಕ್ಷಕ ಹಾಗೂ ಉಪನ್ಯಾಸಕರಿಂದ ಶಿಬಿರದ ಕಾಲದಲ್ಲಿ ಕಲಿಸಲಾಗುವದು. ಅಲ್ಲದೇ ಸಂಸ್ಕಾರ ಚೇತನ ಗಾನಸುಧಾ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ. ನಗರದ ವಿವಿಧ ಬಡಾವಣೆಗಳಿಂದ ಸುಮಾರು 60 ಕ್ಕೂ ಮಿಕ್ಕಿ ಬಾಲಕ-ಬಾಲಕಿಯವರು ಈ ಶಿಬಿರದಲ್ಲಿ ಭಾಗವಹಿಸಿರುವರು.

ಸುಮತಿ ಜೋಶಿ ಪ್ರಾರ್ಥನಾ ಗೀತೆ ಹಾಡಿದರು.  ಪ್ರಜ್ವಲ್, ಅಕ್ಷಯ, ಮಧುಶ್ರೀ ದೇಸಾಯಿ ಹಾಗೂ ವಿಜಯಲಕ್ಷೀ ದೇಶಭಕ್ತಿಗೀತೆ ಹಾಡಿದರು.

ಸೃಷ್ಟಿ ಕುಲಕಣರ್ಿ ಸ್ವಾಗತಿಸಿದರು.  ಮಾಳವಿಕಾ ಜೋಶಿ ಹಾಗೂ ನಿಖಿತಾ ಮಮದಾಪೂರ ಅತಿಥಿಗಳನ್ನು ಪರಿಚಯಿಸಿದರು ಅವನಿ ಮಮದಾಪುರ  ಕಾರ್ಯಕ್ರಮ ನಿರೂಪಿಸಿದರು. ನಿಖಿತಾ ಪಟವರ್ಧನ ವಂದಿಸಿದರು. ಶಿಬಿರದ ಪ್ರಥಮ ದಿನದಂದು ಕಾರ್ಯಕ್ರಮದ ಕೊನೆಗೆ ಒಂದು ಗಂಟೆಗಳ ಕಾಲ  ರಾಮಸಿಂಗ್ ರಜಪೂತ ಅವರು ಸಂಸ್ಕ್ರತ ಸಂಭಾಷಣಾ ಚಟುವಟಿಕೆ  ನಡೆಸಿಕೊಟ್ಟರು