ವಿಜಯಪುರ: 29 ರಂದು ವಿದ್ಯಾರ್ಥಿಗಳ ಸಮಾವೇಶ

ಲೋಕದರ್ಶನ ವರದಿ

ವಿಜಯಪುರ 24: ಇಲ್ಲಿನ ಬಿ.ಎಲ್.ಡಿ.ಇ ಸಂಸ್ಥೆ ಎ.ವಿ.ಎಸ್ ಆಯುವರ್ೆದ ಮಹಾವಿದ್ಯಾಲಯ, ಆಸ್ಪತ್ರೆಯಲ್ಲಿ ಅಭ್ಯಸಿಸಿದ ಹಿಂದಿನ ವಿದ್ಯಾಥರ್ಿಗಳ ಸಮಾವೇಶ ದಿ.29 ರಂದು ರವಿವಾರ ಬೆಳಿಗ್ಗೆ 10 ಗಂ.ಟೆಗೆ ಜರುಗಲಿದೆ.  

ಜಪಾನ್ ದೇಶದ ಟೋಕಿಯೊ ನಗರದಲ್ಲಿರುವ ನಿಪ್ಪೋನ್ ಆಯುರ್ವೇದ ಸ್ಕೂಲ್ ನಿದರ್ೆಶಕ ಡಾ.ಯು.ಕೆ.ಕೃಷ್ಣ ಮುಖ್ಯಅತಿಥಿಗಳಾಗಿ  ಪಾಲ್ಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯುವರ್ೆದ ಬಳಕೆ ಕುರಿತು ಮಾತನಾಡುವರು.

ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ್, ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಈ ಕಾಲೇಜಿನಲ್ಲಿ ಅಭ್ಯಸಿಸಿ, ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಆಯುಷ್ ಇಲಾಖೆ ನಿವೃತ್ತ ನಿದರ್ೆಶಕ ಡಾ.ಎಸ್.ಎಂ.ಅಂಗಡಿ, ಆಯುಷ್ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಎಸ್.ಜಿ.ಮಂಗಳಗಿ, ಭಾರತೀಯ ಆಯುವರ್ೆದ ವೈದ್ಯ ಪರಿಷತ್ (ಸಿಸಿಐಎಂ) ಮಾಜಿ ಸದಸ್ಯರಾದ ಡಾ.ಜಿ.ಬಿ.ಪಾಟೀಲ್, ಡಾ.ಎ.ಎಂ.ಗೌಡರ ಅಲ್ಲದೇ ಡಾ.ಎ.ವಿ.ಡಾಣಕಸಿರೂರ, ಡಾ.ಕೆ.ಬಿ.ನಾಗೂರ, ಡಾ.ಆರ್.ಎಸ್.ಸರಶೆಟ್ಟಿ, ಡಾ.ಎಂ.ಎಸ್.ಕಪರ್ೂರಮಠ, ಡಾ.ಅಶೋಕ ಎಂ.ವಾಲಿ, ಡಾ.ಅನುರಾಧ ಚಂಚಲಕರ ಹಾಗೂ ಡಾ.ಸಿ.ಪಿ.ಕುಪ್ಪಿ ಅವರನ್ನು ಸನ್ಮಾನಿಸಲಾಗುವದು ಎಂದು ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ತಿಳಿಸಿದ್ದಾರೆ.