ವಿಜಯಪುರ 02: ನಗರದ ಪೈಲ್ವಾನ್ ಗಲ್ಲಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ವಿಜಯಪುರ ನಗರ ಯೋಜನೆಯಲ್ಲಿ ಫೆ.1ರ ಶನಿವಾರದಂದು ಪೋಷಣ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ.ಎಚ್.ಸುರಪುರ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕಿಯರಾದ ಅಶ್ವಿನಿ ಸನದಿ, ಶಹನಾಜ ಬೇಗಂ, ಹೈದರಖಾನ, ದೀಪಾ ರಾಠೋಡ, ರೇಶ್ಮಾ ಚವ್ಹಾಣ, ಅಂಗನವಾಡಿ ಕಾರ್ಯಕತರ್ೆಯರು, ಕಲಾ ತಂಡದವರು, ಸ್ಥಳಿಯರು ಉಪಸ್ಥಿತರಿದ್ದರು.