ವಿಜಯಪುರ: ಶಿವಾಜಿ ತತ್ವಾದರ್ಶ ವಿಶ್ವಕ್ಕೆ ಮಾದರಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಹೇಳಿಕೆ

ಲೋಕದರ್ಶನ ವರದಿ

ವಿಜಯಪುರ 19: ಶಿವಾಜಿ ಮಹಾರಾಜರು ಕೇವಲ ಒಂದು ಜಿಲ್ಲೆ, ನಾಡು, ರಾಜ್ಯಕ್ಕೆ ಸೀಮಿತವಾಗಿಲ್ಲ, ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಅಂತಹ ಶ್ರೇಷ್ಠ ಮಹಾವೀರನ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಎಲ್ಲ ಯೋಧ ಮಹನೀಯರಿಗಿಂತ, ಶಿವಾಜಿ ಮಹಾರಾಜರು ವಿಭಿನ್ನ ಮತ್ತು ವಿಶೇಷತೆವುಳ್ಳವರಾಗಿದ್ದರು. ಧೈರ್ಯ, ಶೌರ್ಯ, ಸಾಹಸ ಹೊಂದಿದ್ದರು. ರಾಣಾಪ್ರತಾಪರ ರೌದ್ರತೆಯ ಜೊತೆಗೆ ಚಾಣಕ್ಯನ ನೀತಿಯನ್ನೂ ಹೊಂದಿದ್ದರಿಂದ ಅದರ  ಪ್ರತೀಕವಾಗಿಯೇ ಏಕ್ ಮಾರಾಠಾ, ಲಾಕ್ ಮಾರಾಠಾ ಎಂಬ ಮಾತು ಪ್ರಚಲಿತದಲ್ಲಿದೆ ಎಂದು ಹೇಳಿದರು.

ಅಫ್ಜಲ್ಖಾನ್ ಮತ್ತು ಶಿವಾಜಿ ನಡುವೆ ಯುದ್ಧದ ಸಂದರ್ಭದಲ್ಲಿಯೇ ಅವರು ಗುಂಡು ನಿರೋಧಕ ಜಾಕೆಟ್ ಧರಿಸಿ ಶಕ್ತಿ ಮತ್ತು ಯುಕ್ತಿಗೆ ಹೆಸರಾಗಿದ್ದರು. 17 ನೇ ಶತಮಾನದಲ್ಲಿಯೇ ನೌಕಾಪಡೆಯ ವ್ಯವಸ್ಥೆಯನ್ನು ಸೃಷ್ಟಿಸಿ, ಭಾರತದ ನೌಕಾಪಡೆಯ ಪಿತಾಮಹರಾಗಿದ್ದಾರೆ. ಗೆರಿಲ್ಲಾಯುದ್ಧವನ್ನು ಅವರು ಪರಿಚಯಿಸಿದ್ದಾರೆ. ಅವರ ಯುದ್ಧನೀತಿಗಳು ಇಂದಿಗೂ ಪ್ರಸ್ತುತವಾಗಿವೆ. ಮಹಾರಾಜರ ಸಂಪೂರ್ಣ ಜೀವನ ಚರಿತ್ರೆ, ಶೌರ್ಯ, ಪಾಂಡಿತ್ಯ, ವಿಚಾರಗಳನ್ನು ಅರಿತುಕೊಂಡು ಪರಿಪೂರ್ಣ ವ್ಯಕ್ತಿತ್ವವನ್ನು ಇಂದಿನ ಯುವಜನತೆ ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಶಿವಾಜಿ ಮಹಾರಾಜ ಬಡವರ, ರೈತರ, ಸ್ರ್ತೀ ಮತ್ತು ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿದ್ದರು, ಸಾಮ್ರಾಜ್ಯದ ವಿಸ್ತಾರದ ನೀತಿಯನ್ನುಹೊಂದಿರದೆ ಅತ್ಯತ್ತಮ ಆಡಳಿತವನ್ನು ನಡೆಸಿದ್ದಾರೆ. ಅಂತಹ ಮಹಾನ ನಾಯಕರನ್ನು ನೇತಾಜಿ, ಸುಭಾಷಚಂದ್ರ ಬೋಸ, ವಿವೇಕಾನಂದರು, ವೀರ ಸಾವರಕರ್ ಅವರಂತ ಶ್ರೇಷ್ಠ ಭಾರತೀಯರು ಕೂಡಾ ಶಿವಾಜಿ ಮಹಾರಾಜ ಎಂದರೆ ಅಪ್ರತಿಮವಾದ ಅಭಿಮಾನ ತೋರಿಸುತ್ತಿದ್ದರು. ಅಂತಹ ಮಹಾನ ನಾಯಕ ಇಂದಿನ ನಾಯಕರಿಗೆ ಮಾದರಿಯಾಗಿ ನಿಲ್ಲುತ್ತಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಡಿ.ಎಚ್ ಕೋಲಾರ, ಮುತ್ತುರಾಜ, ಹನುಮಂತ ಕುಲಕಣರ್ಿ ಮಂಜುಳಾ ಹಿಪ್ಪರಗಿ ಸಂಗಡಿಗರು ಮತೃವಾತ್ಸಲ್ಯದ ಪ್ರತೀಕ ನಾಟಕವನ್ನು ಪ್ರಸ್ತುತಪಡಿಸಿ ನೋಡುಗರ ಮನತಣಿಸಿದರು.

ವಿಜಯಕುಮಾರ ಚವ್ಹಾಣ, ಅರುಣ ಕದಂ, ರಾಮನಗೌಡ ಬಸನಗೌಡ ಪಾಟೀಲ (ಯತ್ನಾಳ), ರಾಜು ಜಾಧವ, ಪರಶುರಾಮ ರಜಪೂತ, ಶಂಕರ ಕನ್ಸೆ, ಶಿವಾಜಿ ಗಾಯಕವಾಡ, ಆನಂದ ಮಾಳೆ, ಜ್ಯೋತಿಬಾ ಸಿಂಧೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ನಿರ್ಮಲಾ ಥೀಟೆ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಮಹೇಶ ಪೋತದಾರ ಸ್ವಾಗತಿಸಿದರು. ಎಚ್.ಎ ಮಮದಾಪೂರ ನಿರೂಪಿಸಿ, ವಂದಿಸಿದರು.