ವಿಜಯಪುರ: ವಿದ್ಯಾದೇವತೆ ಕಾಂಕ್ರಿಟ್ ಕಟ್ಟಡಗಳಲಿಲ್ಲ ಸಿದ್ದೇಶ್ವರ ಶ್ರೀಗಳ ಹೇಳಿಕೆ

ಲೋಕದರ್ಶನ ವರದಿ

ವಿಜಯಪುರ 27: ವಿದ್ಯಾದೇವತೆ ಸರಸ್ವತಿ ಶಹರಗಳಲ್ಲಿರುವ ಕಾಂಕ್ರಿಟ್ ಕಟ್ಟಡಗಳಿಲ್ಲ. ಬದಲಾಗಿ ಹರಿಯುವ ಜುಳು-ಜುಳು ನೀರಿನ ದಡದಲ್ಲಿ, ವನಸಿರಿಯ ಮಧ್ಯದಲ್ಲಿ ಸರಸ್ವತಿ ವಾಸವಾಗಿದ್ದಾಳೆ. ಇಂತಹ ಪ್ರಕೃತಿ ಮಡಿಲಿನ ಶಾಲೆಗಳಲ್ಲಿ ಪಡೆಯುವ ಶಿಕ್ಷಣದಿಂದ ಮಕ್ಕಳ ಸರ್ವಾ೦ಗೀಣ ಪ್ರಗತಿಯಾಗುತ್ತದೆ ಎಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದ ಹತ್ತಿರ ಎಂ.ಎಸ್.ಬಬಲೇಶ್ವರ ವಿದ್ಯಾವರ್ಧಕ ಸಂಘ ದಶಮಾನೋತ್ಸವ, ಶ್ರೀ ಬಸವರಾಜ ಶಾಂತಪ್ಪ ಕವಲಗಿ 50ನೇ ಹುಟ್ಟುಹಬ್ಬ ನೆನಪಿನಲ್ಲಿ ನೂತನ ಶಾಲಾ ಕೊಠಡಿಗಳು ಉದ್ಘಾಟನೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ತಾವು ಸರಸ್ವತಿಯ ಚಿತ್ರವನ್ನು ಗಮನಿಸಿದರೆ ಪ್ರಕೃತಿಯ ಮಧ್ಯದಲ್ಲಿ, ಗಿಡದ ನೆರಳಿನಲ್ಲಿ ಕಲ್ಲಿನ ಕಟ್ಟೆಯ ಮೇಲೆ ಆಕೆ ಕೂತಿದ್ದಾಳೆ. ಅಂದರೆ ಸರಸ್ವತಿ ವಿದ್ಯಾದೇವತೆ ಪ್ರಕೃತಿಯ ಮಡಿಲಲ್ಲಿಯೇ ನಮಗೆ ಒಲಿಯುವಳು. ಮಹಾನಗರಗಳ ಕಾಂಕ್ರಿಟ್ ಕಟ್ಟಡಗಳ ದೊಡ್ಡ ಶಾಲೆಗಳಲ್ಲಿ ಸಿಗುವ ಶಿಕ್ಷಣಕ್ಕಿಂತ ಈ ರೀತಿ ಗ್ರಾಮೀಣ ಪ್ರದೇಶದ, ಹಸಿರಿನ ಸಿರಿಯ ಮಧ್ಯದ ಈ ಶಾಲೆ ಮುಂದಿನ ದಿನಗಳಲ್ಲಿ ಸುವರ್ಣ ಸಂಭ್ರಮ ಆಚರಿಸಿ, ಇಲ್ಲಿಂದ ಶ್ರೇಷ್ಠ ವ್ಯಕ್ತಿಗಳು ಹೊರಬಂದು ಅನ್ನ, ಅಕ್ಷರ, ಆಸರೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವಂತಾಗಲಿ ಎಂದರು.

ಎಂ.ಬಿ.ಪಾಟೀಲ್ರ ನೀರಾವರಿ ಕುರಿತು ಮೆಚ್ಚುಗೆ: 

ಕೆಲವರು ಮಂತ್ರಿಗಳಾಗುತ್ತಾರೆ. ಅದು ಸಕರ್ಾರ ಇರುವವರೆಗೆ ಮಾತ್ರ ಸೀಮಿತ. ಸರ್ಕಾರ ಹೋದ ನಂತರ ಅವರು ಮಾಜಿ ಆಗುತ್ತಾರೆ. ಆದರೆ ಎಂ.ಬಿ.ಪಾಟೀಲ್ರು ಸಕರ್ಾರದ ಸಚಿವರಲ್ಲ. ಜಲದ ಸಚಿವರು. ಜಲಸಂಪನ್ಮೂಲ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಯಿಂದ ಜಲ ಇರುವವರೆಗೂ ಇವರೇ ಸಚಿವರು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಇಂದು ಒತ್ತು ನೀಡುವ ಅಗತ್ಯ ಇದೆ. ಹೆಚ್ಚು ಶಿಕ್ಷಣ ಸಂಸ್ಥೆಗಳು ಆರಂಭಗೊಂಡಲ್ಲಿ ಗುಣಾತ್ಮಕ ಶಿಕ್ಷಣದ ಮಹತ್ವ ಹೆಚ್ಚಾಗುತ್ತದೆ. ವಿಜಯಪುರ ಜಿಲ್ಲೆ ಇಂದು ಶಿಕ್ಷಣದ ಕೇಂದ್ರ ಸ್ಥಾನವಾಗಿ ರೂಪುಗೊಳ್ಳುತ್ತಿದೆ. ಇದಕ್ಕೆ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರಣವಾಗಿವೆ ಎಂದರು.

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಬಸವರಾಜ ಎಸ್.ಕೌಲಗಿ, ಬಿ.ಎಲ್.ಡಿ.ಇ ಸಂಸ್ಥೆಯ ನೂತನ ನಿರ್ದೇಶಕ ವಿ.ಎಸ್.ಪಾಟೀಲ್ ಬಬಲೇಶ್ವರ, ಚಾಣಕ್ಯ ಕರಿಯರ್ ಅಕಾಡೆಮಿ ಎನ್.ಎಂ.ಬಿರಾದಾರ ಇವರನ್ನು ಸನ್ಮಾನಿಸಲಾಯಿತು. ಮಮದಾಪುರ ಅಭಿನವ ಮುರುಗೇಂದ್ರ ಮಹಾಸ್ವಾಮಿಗಳವರು ಸಾನಿಧ್ಯ ವಹಿಸಿದ್ದರು. ಕಾತ್ರಾಳ ಬಾಲಗಾಂವ ಅಮೃತಾನಂದ ಸ್ವಾಮಿಜಿ, ಶಿವಣಗಿ ಶಿವಲಿಂಗ ಸ್ವಾಮಿಜಿ, ಶಿವಾನಂದ ಎನ್.ಕೆಲೂರ, ಉದ್ಯಮಿ ದುಂಡಪ್ಪಣ್ಣ ಗುಡ್ಡೊಡಗಿ ವೇದಿಕೆಯಲ್ಲಿದ್ದರು. 

ಸಂಗಮೇಶ ಬಬಲೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಎಲ್.ಪಿ.ಬಿರಾದಾರ ವಂದಿಸಿದರು. ರಾಜಶೇಖರ ಕವಲಗಿ,ಶಿವಾನಂದ ಕಲ್ಯಾಣಿ, ದಯಾನಂದ ಕೆಲೂರು, ನಾಗೇಶ ಹಳೆಮನಿ ಮತ್ತಿತರರು ಉಪಸ್ಥಿತರಿದ್ದರು.