ವಿಜಯಪುರ: ಮಾ.4ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಲೋಕದರ್ಶನ ವರದಿ

ವಿಜಯಪುರ 20: ದ್ವಿತೀಯ ಪಿಯುಸಿ ವಾರ್ಶಿ ಕ ಪರೀಕ್ಷೆಗಳು ದಿ,04-03-2020 ರಿಂದ 23-03-2020 ರವರೆಗೆ ನಡೆಯಲಿದ್ದು, ಈ ಪರೀಕ್ಷೆಗಳನ್ನು ಇಲಾಖೆಯ ನಿಯಮಗಳಿಗೆ ಅನುಸಾರವಾಗಿ ಯಾವುದೇ ಲೋಪದೋಷಗಳಾಗದಂತೆ ಹಾಗೂ ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಎಸ್.ಬಿ.ಕಲಾ ಹಾಗೂ ಕೆ.ಸಿ.ಪಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ನಡೆದ ದ್ವಿತೀಯ ಪಿ.ಯು.ಸಿ ಪರೀಕ್ಷಾ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 27359 ವಿದ್ಯಾರ್ಥಿಗಳಲ್ಲಿ 15972 ವಿದ್ಯಾಥರ್ಿಗಳು, 11387 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದು, ಜಿಲ್ಲೆಯಲ್ಲಿ 4 ಸರ್ಕಾರಿ ಕಾಲೇಜು, 27 ಅನುದಾನಿತ ಹಾಗೂ 10 ಅನುದಾನ ರಹಿತ ಕಾಲೇಜುಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು 41 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದೆ ಎಂದರು.

ದ್ವಿತೀಯ ಪಿ.ಯು.ಸಿ ಪರೀಕ್ಷಾ ಸಮಯದಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ನಡೆಯುವ ಸಮಯದಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತು ಪಡಿಸಿ, ಅನ್ಯರಿಗೆ ಪ್ರವೇಶ ಕಲ್ಪಿಸಬಾರದು ಹಾಗೂ ಪರೀಕ್ಷಾ ಕ್ರಮಗಳ ಬಗ್ಗೆ ಯಾವುದೇ ಸುದ್ಧಿ ವಾಹಿನಿಗಳು ಬ್ರೇಕಿಂಗ್ ನ್ಯೂಸ್ಗಳನ್ನು ಬಿತ್ತರಿಸುವಂತಿಲ್ಲ ಎಂದು ಸೂಚಿಸಿದರು.

ದ್ವಿತೀಯ ಪಿಯುಸಿ ವಾರ್ಥಿಕ ಪರೀಕ್ಷೆಗೆ ನಿರ್ದೇಶನಾಲಯದ ಪ್ರಕಾರ ಸಾಧ್ಯವಿದ್ದ ಶಾಲೆಯ  ವಿದ್ಯಾರ್ಥಿಗಳನ್ನು ರ್ಯಾಂಡಮೈಜ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ರ್ಯಾಂಡಮೈಜೇಶನ್ ಆಗದೇ ಇದ್ದ ಪರೀಕ್ಷಾ ಕೇಂದ್ರಗಳಲ್ಲಿ ಸಂಪೂರ್ಣ ಸಿಬ್ಬಂದಿಗಳನ್ನು ರ್ಯಾಂಡಮೈಜ್ ಮಾಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ಪ್ರವೇಶ ಪತ್ರಗಳನ್ನು ದಿ: 12-02-2020 ರ ಒಳಗಾಗಿ ಪಿ.ಯು.ಇ ವೆಬ್ಸೈಟ್ದಲ್ಲಿ ಅಪ್ಲೋಡ್ ಮಾಡಲಾಗಿರುತ್ತದೆ. ಪಿ.ಯು.ಇ ವೆಬ್ಸೈಟ್ದಿಂದ ಅಂತಿಮ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಂಡು  ಆಯಾ ಶಾಲೆಯ ಪ್ರಾಚಾರ್ಯರು ವಿದ್ಯಾಥರ್ಿಗಳಿಗೆ ವಿತರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಉಪವಿಭಾಗಾಧಿಕಾರಿ ಶ್ರೀ ಗೆಣ್ಣೂರ, ಪಿಯು ಬೋಡರ್್ನ ಉಪ ನಿರ್ದೇಶಕ ಜೆ.ಎಸ್.ಪೂಜಾರಿ, ಎಲ್ಲಾ ತಾಲೂಕು ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.