ವಿಜಯಪುರ 26: ಜಿಲ್ಲಾ ಪಂಚಾಯತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನಗರದ ಪಿಡಿಜೆ ಪದವಿಪೂರ್ವ ಮಹಾವಿದ್ಯಾಲಯ (ಮಾಧ್ಯಮಿಕ ವಿಭಾಗ) ವಿದ್ಯಾರ್ಥಿನಿ ಕುಮಾರಿ ಶಿರಿನಬಾನು ಅಕ್ಕಲಕೋಟ "ಮಾಲಿನ್ಯರಹಿತ ವಾಟರ್ ರಾಕೆಟ್ ಮಾದರಿಯನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಇದೇ ಶಾಲೆಯ ಕುಮಾರ ಸೌರಭ ಕಟ್ಟಿ ಈತನು ತಯಾರಿಸಿದ "ಸಾರಿಗೆ ಮತ್ತು ಸಂಪರ್ಕ ಮಾದರಿ ಪ್ರದರ್ಶಿಸಿ ಜಿಲ್ಲೆಗೆ ತೃತಿಯ ಸ್ಥಾನ ಪಡೆದಿದ್ದಾನೆ. ವಿಜ್ಞಾನ ಶಿಕ್ಷಕ ವಿ.ಆರ್. ಕಟ್ಟಿ ಅವರು ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರು, ಉಪಪ್ರಾಚಾರ್ಯರು, ಆಡಳಿತ ಮಂಡಳಿ ಎಲ್ಲ ಸದಸ್ಯರು ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.