ವಿಜಯಪುರ: ಸಮಿತಾ ಮಹರ್ಷಿ ಜಯಂತಿ ಆಚರಣೆ

ಲೋಕದರ್ಶನ ವರದಿ

ವಿಜಯಪುರ 11: ಜಗತ್ತಿನಲ್ಲಿ ಭಾರತೀಯರ ಪಾಂಡಿತ್ಯಕ್ಕೆ ಅತ್ಯಂತ ಗೌರವವಿದೆ. ಅಂತಹ ಪಾಂಡಿತ್ಯವನ್ನು ಹೊಂದಿರುವ ಮಹರ್ಷಿಗಳಲ್ಲಿ ಸವಿತಾ ಮಹಷರ್ಿಗಳು ಪ್ರಮುಖರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳುವುದು ಅವಶ್ಯಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಸಮಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತೀಯರ ಜ್ಞಾನ ಮತ್ತು ವೇದಗಳಿಗೆ ವಿಶ್ವದಲ್ಲಿ ಅತ್ಯಂತ ಗೌರವ ಮನ್ನಣೆಯಿದೆ. ಸವಿತಾ ಮಹರ್ಷಿಗಳು ಪ್ರಾಚೀನ ಕಾಲದಲ್ಲಿ ತಮ್ಮ ತತ್ವ, ವಿಚಾರಗಳನ್ನು ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ  ಸಾಮವೇದವನ್ನು ರಚಿಸಿ ಸಂಗೀತದ ಮೂಲಕ ಅವರ ಚಿಂತನೆ, ವಿಚಾರಗಳನ್ನು ತಿಳಿಸಿದರು ಎಂದು ಹೇಳಿದರು.

ಎಲ್ಲರೂ ಒಂದೇ ಸಮಾಜದವರು ಎಂದು ಸಾರಿದವರು ಮಹರ್ಷಿಗಳು ಅಂತವರ ಚಿಂತನೆಗಳನ್ನು ಇಂದು ಪ್ರತಿಯೊಬ್ಬರು ಅರಿತುಕೊಂಡು ಬಾಳಬೇಕಾಗಿದೆ ಎಂದು ಅವರು ಕರೆ ನೀಡಿದರು. ಯಾವ ಸಮಾಜದಲ್ಲಿ ಗುರು-ಹಿರಿಯರನ್ನು ಗೌರವಿಸುತ್ತಾರೆ ಅಂತಹ ಸಮುದಾಯ ಉತ್ಕೃಷ್ಟವಾಗಿ ಬೆಳೆಯುತ್ತದೆ. ಅದರಂತೆ ಸರಕಾರ ಜಯಂತಿಗಳನ್ನು ಆಚರಿಸುವ ಉದ್ದೇಶ ಸಮಾಜದ ಬಾಂಧವರನ್ನು ಒಂದು ಗೂಡಿಸುವುದಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವಂತೆ  ಸಮಾಜದ ಒಳತಿಗಾಗಿ ಎಲ್ಲರೂ ಒಗ್ಗೂಡಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗೋವಿಂದ ರೆಡ್ಡಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್.ಜಿ ಲೋಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಿ.ಎಮ್.ದೊಡ್ಡಮನಿ, ಬಸವರಾಜ ಹಡಪದ, ಶೇಖರ ದೇವದುರ್ಗ, ನರ್ಸಪ್ಪ ನಾವಿ, ರೇಣುಕಾ ಬಳ್ಳಾರಿ, ರಾಘವೇಂದ್ರ ಗುರ್ಜಾಲ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ ಗಾರಾರದ ಶ್ರೀಮತಿ ಭಾರತಿ ಕುಂದಣಗಾರ ನಾಡಗೀತೆ ಹಾಡಿ, ಸುಗಮ ಸಂಗೀತ ಕಚೇರಿ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಹೇಶ ಪೋತದಾರ, ಸಂಗಮೇಶ ಬಾದಾಮಿ ನಿರೂಪಿಸಿ ವಂದಿಸಿದರು.