ಲೋಕದರ್ಶನ ವರದಿ
ವಿಜಯಪುರ 18: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಸರಕಾರಿ ನೌಕರರೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ) ಹಾಗೂ ರಾಷ್ಟ್ರೀಯ ಬಂಜಾರಾ ಟೈಗರ್ಸ್ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆಸರಟ್ಟಿ ಸೋಮಲಿಂಗ ಮಹಾರಾಜರು ಹಾಗೂ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯ ಉಪಾದ್ಯಕ್ಷ ಸಚಿನ ಚವ್ಹಾಣ ಅವರು ಮಾತನಾಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳನ್ನು ಸರಕಾರದಲ್ಲಿ ವಿಲೀನಗೊಳಿಸಿ ಸಾರಿಗೆ ನೌಕರರಿಗೂ ಸರಕಾರಿ ನೌಕರರಂತೆ ಇರುವ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ನಿಗಮಗಳಲ್ಲಿ 1.25 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಹಗಲು ರತ್ರಿ ಎನ್ನದೆ ಸರಿಯಾದ ಊಟ ಉಪಚಾರವಿಲ್ಲದೆ ಸಮಯಕ್ಕೆ ಸರಿಯಾಗಿ ನಿದ್ದೆ ವಿಶ್ರಾಂತಿ ಇಲ್ಲದೆ ದುಡಿಯುತ್ತಿರುವ ಕಾರಣದಿಂದಲೇ ಸಂಸ್ಥೆಗೆ ಇಡೀ ದೇಶದಲ್ಲೆ ಅತ್ಯುತ್ತಮ ಸಾರಿಗೆ ಸಂಸ್ಥೆಯೆಂದು ಹೆಸರು ಮಾಡುವ ಮೂಲಕ ಅನೇಕ ಅಂತರಾಷ್ಟ್ರಿಯ ಪ್ರಶಸ್ತಿಗಳನ್ನು ಅಲಂಕರಿಸಿದೆ ಎಂದು ತಿಳಿಸಿದರು.
ಗೋಪಾಲ ಮಹಾರಾಜ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ರಾಜ್ಯ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಕೆ., ವಿಜಯಪುರ ವಿಭಾಗದ ಅಧ್ಯಕ್ಷರಾದ ವೆಂಕಟೇಶ ಲಮಾಣಿ, ಪ್ರಧಾನ ಕಾರ್ಯದಶರ್ಿ ಸಚೀನಕುಮಾರ ಕಾಖಂಡಕಿ, ಹಾಗೂ ವಿಜಯಪುರ ವಿಭಾಗದ ಎಲ್ಲ ಸಂಘಟನೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದಶರ್ಿ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.