ವಿಜಯಪುರ 28: ನಗರದಲ್ಲಿ ನಡೆದ ಹುಬ್ಬಳ್ಳಿ ನಗರದ ಹುಬ್ಬಳ್ಳಿ ನೈಋತ್ಯ ರೇಲ್ವೆ ವ್ಯವಸ್ಥಾಪಕ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಭಾಗವಹಿಸಿ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ ಅಂಗಡಿಯರಿಗೆ ವಿಜಯಪುರ ಜಿಲ್ಲೆಯ ನಾಗರಿಕರ ಹಲವು ವರ್ಷಗಳ ಬೇಡಿಕೆಯಾದ ಹೊಸ ಹುಬ್ಬಳ್ಳಿ-ವಿಜಯಪುರ (ಇಂಟರಸಿಟಿ) ಪ್ರತಿ ದಿನ ಪ್ರಾರಂಭಗೊಳಿಸಲು ಮನವಿ ಸಲ್ಲಿಸಲಾಯಿತು.
ಈ ಮನವಿಗೆ ಸ್ಪಂದಿಸಿದ ಸಚಿವರು ಹಾಗೂ ರೇಲ್ವೆ ಅಧಿಕಾರಿಗಳು ಮುಂದಿನ ವಾರದಲ್ಲಿ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದರು ಎಂದು ತಿಳಸಿದ್ದಾರೆ.