ವಿಜಯಪುರ 21: ರಾಜ್ಯ ಕನರ್ಾಟಕ ನವ ನಿರ್ಮಾಣ ವೇದಿಕೆ ವಿಜಯಪುರ ಬೆಂಗಳೂರು ವತಿಯಿಂದ ಜಿಲ್ಲಾ ರಾಜ್ಯೋತ್ಸವ -2019 ಪ್ರಶಸ್ತಿಯನ್ನು ಮಹ್ಮದರಫೀಕ ನದಾಫ್ ಅವರಿಗೆ ನೀಡಲಾಯಿತು.
ಮಹ್ಮದರಫಿಕ್ ನದಾಫ್ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಂಡಾಂಗಣದಲ್ಲಿ ವ್ಹಾಲಿಬಾಲ್ ತರಬೇತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರ ಹಾಗೂ ವಿಶ್ವವಿದ್ಯಾಲಯ ಧಾರವಾಡದಲ್ಲಿ ಭಾಗವಹಿಸಿರುತ್ತಾರೆ. ಅವರ ಕೈಯಲ್ಲಿ 8 ಜನ ವಿದ್ಯಾಥರ್ಿಗಳು ರಾಷ್ಟ್ರ ಮಟ್ಟದಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕ್ರೀಡೆ ಆಡಿ ಸಾಧನೆಗೈದಿದ್ದಾರೆ. ಕ್ರೀಡಾ ಸಾಧನೆ ಗುರುತಿಸಿ ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಮಾಜಿ ಸಚಿವರು ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸನ್ಮಾನಿಸಿ ಗೌರವಿಸಿದರು.