ವಿಜಯಪುರ: ವಿವೇಕಾಂದರ ಜಯಂತಿ ನಿಮಿತ್ತ ಕಾರ್ಯಕ್ರಗಳ ಆಯೋಜನೆ

ಲೋಕದರ್ಶನ ವರದಿ ವಿಜಯಪುರ 08: ಸ್ವಾಮಿ ವಿವೇಕಾಂದರ ಜನ್ಮ ದಿನಾಚರಣೆಯ ಅಂಗವಾಗಿ ದಿ:12-1-2020 ರಂದು ಜಿಲ್ಲಾಡಳಿತ ಆಶ್ರಯದಲ್ಲಿ ವಿಜ್ರಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಅಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕಾರ್ಯಕ್ರಮ ಯಶಸ್ವಿಗೊಳಿ ಸಬೇಕು ಎಂದು ಕಾರ್ಯಕ್ರಮದ ಆಯೋಜನೆಗಾಗಿಯೇ ರಚಿಸಿರುವ ಜಿಲ್ಲಾ ಸಮಿತಿ ಸದಸ್ಯರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಅಂದು ಬೆಳಿಗ್ಗೆ 9 ಗಂಟೆಗೆ ವಿವೇಕಾಂದರ ಜೀವನ ಸಾರ, ತತ್ವ ಹಾಗೂ ಸಂದೇಶಗಳನ್ನು ಯುವ ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ಸ್ತಬ್ಧ ಚಿತ್ರಗಳು ಮತ್ತು ಸೂಕ್ತಿಗಳನ್ನು ಪ್ರದರ್ಶಿಸುವ ಫಲಕಗಳನ್ನು ಒಳಗೊಂಡಿರುವಂತೆ ಜಾಥಾ ಹಮ್ಮಿಕೊಳ್ಳುವುದು. ಸ್ವಾಮಿ ವಿವೇಕಾಂದರ ಕುರಿತು ಅನುಭಾವಿ ವಾಗ್ಮಿಗಳಿಂದ ಭಾಷಣ ಆಯೋಜಿಸುವುದು. ಕಾರ್ಯಕ್ರಮಕ್ಕೆ ಮೊದಲೇ ಪೂರ್ವಭಾವಿಯಾಗಿ ಜಿಲ್ಲೆಯ ಕಾಲೇಜು ವಿದ್ಯಾಥರ್ಿಗಳಿಗೆ ಆಶು ಭಾಷಣ ಸ್ಪರ್ದೇ, ಚರ್ಚೆ ಸ್ಪರ್ಧೆ,ಪ್ರಬಂಧ ಹಾಗೂ ಸ್ವಾಮಿ ವಿವೇಕಾಂದರ ಕುರಿತ ವಿವಿಧ ಸ್ಪರ್ಧೆ ಗಳನ್ನು ಜಿಲ್ಲೆಯ ಲೀಡ್ ಕಾಲೇಜುಗಳಲ್ಲಿ ಏರ್ಪಡಿಸಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾಥಿಗಳಿಗೆ ಬಹುಮಾನ ವಿತರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ವಿವೇಕಾನಂದರ ಜೀವನ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಲೀಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 10 ಜನ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಲ್ಯಾಪ್ಟಾಪ್ ವಿತರಿಸುವುದು. ಯುವ ಸಬಲೀಕರಣ ಕೇಂದ್ರ ಉದ್ಘಾಟನೆ ಸೇರಿದಂತೆ ಹತ್ತು ಹಲವಾರು ಮಹತ್ತರ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ವಿವೇಕಾಂದರ ಜಯಂತಿಯನ್ನು ಯುವಕರ ಮನ ಮುಟ್ಟುವಂತೆ ಆಚರಿಸಲು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಹರ್ಷಾ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಮಹೇಶ ಪೋತದಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಸನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.