ಲೋಕದರ್ಶನ ವರದಿ
ವಿಜಯಪುರ 19: ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ಬರುವಂತಹ ವಿಶೇಷ ಘಟಕ ಗಿರಿಜನ ಉಪಯೋಜನಡಿಯ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿಧಾನ ಸಭಾ ಸಚಿವಾಲಯದ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಕಲ್ಯಾಣ ಸಮೀತಿ ಅಧ್ಯಕ್ಷ ಎಸ್.ಅಂಗಾರ ಹೇಳಿದ್ದಾರೆ.
ಜಿಲ್ಲೆಯ ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮ ವ್ಯವಸ್ಥಾಪಕ ನಿರ್ದೇಶಕರ ಆಡಳಿತ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಪತ್ರಿಕಾ ಗೋಷ್ಟಿ ನಡೆಸಿದ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮೀತಿಯೂ ಪರಿಶೀಲಿಸಿದ್ದು ಕೆಲವು ಕಾಮಗಾರಿ ಹೊರತು ಪಡಿಸಿ ಹೆಚ್ಚಿನ ಕಾಮಗಾರಿಗಳು ಪೂರ್ಣಗೊಳಿಸಲಾಗಿದೆ. ವಿಶೇಷವಾಗಿ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಅನುದಾನ ಸಮರ್ಪಕ ಬಳಕೆ ಕುರಿತಂತೆ ಪರಿಶೀಲಿಸಲಾಗಿದ್ದು ಆದ್ಯತೆ ಮೇಲೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಮೀತಿ ಮೂಲಕ ಸೂಚಿಸಲಾಗಿದೆ ಎಂದು ಹೇಳಿದರು.
ಕೃಷ್ಣಾ ಭಾಗ್ಯ ಜಲ ನಿಗಮದ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿಯ ಕಾಮಗಾರಿಗಳ ಮೇಲು ಉಸ್ತುವಾರಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿದರ್ೆಶಕರಾದ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು ಈ ನಿಗಮದ ವ್ಯಾಪ್ತಿಯಲ್ಲಿ ಅನುಷ್ಟಾನಗೊಂಡ ಯೋಜನೆಗಳ ಕುರಿತಂತೆ ವರದಿ ಸಹ ಸಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಅದರಂತೆ ಜಿಲ್ಲೆಯ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಮಂಜೂರಾದ ಅನುದಾನವನ್ನು ಸಮಯಕ್ಕೆ ಸರಿಯಾಗಿ ಸದ್ಭಳಕೆ ಮಾಡುವುದರ ಜೊತೆಗೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಟಾನಕ್ಕೆ ಸೂಚಿಸಲಾಗಿದೆ. ಈ ಯೋಜನೆಗಳ ಪರಿಶೀಲನೆಯನ್ನು ಸಹ ಮಾಡಲಾಗುತ್ತಿದ್ದು ಗುಣಮಟ್ಟದ ಮತ್ತು ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ಕಳೆ 3 ವರ್ಷಗಳ ಅವಧಿಯಲ್ಲಿ ಪ್ರಮುಖ ನೀರಾವರಿ ಯೋಜನೆಗಳಿಗಾಗಿ ಮಂಜೂರಾದ ಅನುದಾನ ಬಗ್ಗೆ ತಿಳಿಸಿದ ಅವರು 2016-17 ಆಥರ್ಿಕ ವರ್ಷದಲ್ಲಿ 4139.56 ಕೋಟಿ ರೂ ಅನುದಾನ ಖರ್ಚು ಮಾಡಲಾಗಿದೆ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ 197.25 ಕೋಟಿ ರೂ ಅದರಂತೆ 2017-18ನೇ ಸಾಲಿನಲ್ಲಿ 4427.93 ಕೋಟಿ ರೂ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ 485.15 ಕೋಟಿ ರೂ ಹಾಗೂ 2018-19 ನೆ ಸಾಲಿನಲ್ಲಿ 4193.01 ಕೋಟಿ ರೂ ಖರ್ಚು ಮಾಡಲಾಗಿದ್ದು ವಿಶೇಷ ಘಟಕ ಗಿರಿಜನ ಉಪಯೋಜನೆಯಡಿ 478.79 ಕೋಟಿ ರೂ ಗಳನ್ನು (ಕಲಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟ, ರಾಯಚೂರ, ಕೊಪ್ಪಳ ಹಾಗೂ ಗದಗ) ಜಿಲ್ಲೆಗಳಲ್ಲಿ ನೀರಾವರಿ ಮತ್ತು ನೀರಾವರಿ ಯೇತರ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಸಮೀತಿಯ ಸದಸ್ಯರಾದ ಬಸವರಾಜ ಮತ್ತಿಮೂಡ, ಟಿ.ಪಿ ಪರಮೇಶ್ವರ ನಾಯ್ಕ, ಅಬ್ಬಯ್ಯ ಪ್ರಸಾದ, ಬಸನಗೌಡ ದದ್ದಲ, ಡಿ.ಎಸ್ ಹೂಲಗೇರಿ, ಎಚ್.ಕೆ.ಕುಮಾರಸ್ವಾಮಿ, ಡಾ.ಕೆ.ಶ್ರೀನಿವಾಸ ಮೂರ್ತಿ, ಎನ್ ಮಹೇಶ, ಆರ್ ಧರ್ಮಸೇನ, ಆರ್ ಪ್ರಸನ್ಕುಮಾರ, ಕೆ.ಪಿ ನಂಜುಂಡಿ ವಿಶ್ವಕರ್ಮ, ಕೆ.ಎ ತಿಪ್ಪೇಸ್ವಾಮಿ, ತಿಪ್ಪಣ್ಣ ಕಮಕನೂರು, ಜಿಲ್ಲಾಧಿಕಾರಿ ವಾಯ್.ಎಸ್ ಪಾಟೀಲ, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಅಧೀಕ್ಷಕ ಅಭಿಯಂತರ ಡಿ.ಬಸವರಾಜ, ಜಗದೀಶ ರಾಠೋಡ, ಮುಖ್ಯ ಅಭಿಯಂತರರಾದ ಆರ್.ಪಿ ಕುಲಕಣರ್ಿ, ಎಫ್.ಎಸ್ ಪಾಟೀಲ, ಪ್ರದೀಪ ಮಿತ್ರ ಉಪಸ್ಥಿತರಿದ್ದರು.