ಲೋಕದರ್ಶನ ವರದಿ
ವಿಜಯಪುರ 18: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಾಷ್ಟ್ರ ಮಟ್ಟದ ಹಾಗೂ ವಿಜಯಪುರ ವಿಭಾಗದ 3 ಘಟಕಗಳಿಗೆ ರಾಜ್ಯ ಮಟ್ಟದ ಉತ್ತಮ ಇಂಧನ ಸಂರಕ್ಷಣಾ ಅವಾರ್ಡ ಲಭಿಸಿದೆ.
ಕೇಂದ್ರ ಸರ್ಕಾರದಿಂದ ನೀಡಿರುವ ರಾಜ್ಯಮಟ್ಟದ ಉತ್ತಮ ಇಂಧನ ಸಂರಕ್ಷಣಾ ಅವಾರ್ಡಗೆ ವಿಜಯಪುರ ವಿಭಾಗದ 3 ಘಟಕಗಲು ಆಯ್ಕೆಯಾಗಿದ್ದು, ವಿಜಯಪುರ 2 ನೇ ಘಟಕಕ್ಕೆ 1 ನೇ ಸ್ಥಾನ, ಬಸವನ ಬಾಗೇವಾಡಿ ಘಟಕಕ್ಕೆ 2 ನೇ ಸ್ಥಾನ ಹಾಗೂ ಸಿಂದಗಿ ಘಟಕಕ್ಕೆ 3 ನೇ ಸ್ಥಾನ ಪಡೆದುಕೋಂಡಿವೆ. ಉತ್ತಮ ಅವಾರ್ಡಗೆ ಆಯ್ಕೆಯಾಗಿರುವ ಈ ಮೂರು ಘಟಕಗಳಿಗೆ ಕೇಂದ್ರ ಸರ್ಕಾರ ತಲಾ 50 ಸಾವಿರ ರೂ.ಗಳ ಬಹುಮಾನ ಘೋಷಿಶಿದೆ. ದಿನಾಂಕ 16-1-2020 ರಂದು ದೆಹಲಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಹೇರಾ ನಾಸಿಂ, ತಾಂತ್ರಿಕ ಶಿಲ್ಪಿ ನಂಜುಡಪ್ಪ, ಬಸವನ ಬಾಗೇವಾಡಿ ಗಟಕ ವ್ಯವಸ್ಥಾಪಕ ವಿನಾಯಕ ಸಾಲಿಮಠ ಇವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಅವಾರ್ಡ ಪಡೆದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಅಭಿನಂದಿಸಿ ಘಟಕದ ಎಲ್ಲ ವ್ಯವಸ್ಥಾಪಕರನ್ನು ಸನ್ಮಾನಿಸಿ ಗೌರವಿವಿಸರು