ಲೋಕದರ್ಶನ ವರದಿ
ವಿಜಯಪುರ 18; ತೊಗರಿ ಬೆಳೆಗೆ ಸಂಬಂಧಿಸಿದಂತೆ ಕೇಂದ್ರ ಸಕರ್ಾರವು ಪ್ರತಿ ಕ್ವಿಂಟಲ್ ತೋಗರಿ ಬೆಳೆಗೆ 5800 ರೂಪಾಯಿ ಬೆಂಬಲ ಬೆಲೆ ಘೋಷಿಸಿದ್ದು, ರಾಜ್ಯ ಸರ್ಕಾರದ ಬೆಂಬಲ ಬೆಲೆ ಘೋಷಣೆಯಾಗ ಬೇಕಾಗಿದ್ದು, ಜಿಲ್ಲೆಯಾದ್ಯಂತ ಪ್ರಸಕ್ತ ವರ್ಷ ತೊಗರಿ ಖರೀದಿ ಕೇಂದ್ರಗಳನ್ನು ಶಿಸ್ತುಬದ್ಧವಾಗಿ-ಯೋಜನಾಬದ್ಧವಾಗಿ ಸ್ಥಾಪಿಸುವ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ವಾಯ್.ಎಸ್ ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಾರ್ಯಾಲಯದಲ್ಲಿ ಇಂದು ತೊಗರಿ ಬೆಳೆ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಕೃಷಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಮತ್ತು ಇತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಖರೀದಿ ಕೇಂದ್ರಗಳಿಗೆ ಬರಬಹುದಾದ ತೊಗರಿ ಬೆಳೆಯ ಸಮಗ್ರ ಸಮೀಕ್ಷೆ ನಡೆಸುವಂತೆ ಕೃಷಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೊಗರಿ ದಾಸ್ತಾನು ಕುರಿತು:
2017-18 ಸಾಲಿನಲ್ಲಿ 73683 ರೈತರಿಂದ ಬೆಂಬಲ ಬೆಲೆ ಯೋಜನೆಯಲ್ಲಿ 848 ಲಕ್ಷ ಕ್ವಿಂಟಾಲ ಹಾಗೂ 2018-19ನೆ ಸಾಲಿನ 37769 ರೈತರಿಂದ 345 ಲಕ್ಷ ಕ್ವಿಂಟಾಲ ಖರಿದಿಸಿದ ತೊಗರಿಯನ್ನು ಜಿಲ್ಲೆಯ ರಾಜ್ಯ ಉಗ್ರಾಣ ನಿಗಮ ಪಕ್ಕದ ಜಿಲ್ಲೆಯಲ್ಲಿ ದಾಸ್ತಾನು ಮಾಡಲಾಗಿದ್ದು, 2019-20ನೆ ಸಾಲಿನಲ್ಲಿ ಬರಬಹುದಾದ ಅಂದಾಜು 15ಲಕ್ಷ ಕ್ವಿಂಟಾಲ ಇಳುವರಿಯಲ್ಲಿ 5ರಿಂದ 6 ಲಕ್ಷ ಕ್ವಿಂಟಾಲ ತೊಗರಿ ಉತ್ಪನ್ನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಆಗಬಹುದೆಂದು ಸಭೆಯಲ್ಲಿ ಅಂದಾಜಿಸಲಾಯಿತು ಹಾಗೂ ಪ್ರಸಕ್ತ ಸಾಲಿನಲ್ಲಿ ಖರೀದಿಸಬಹುದಾ ತೊಗರಿ ಉತ್ಪನ್ನವನ್ನು ಉಗ್ರಾಣಗಳಲ್ಲಿ ದಾಸ್ತಾನು ಮಾಡಲು ಸ್ಥಳಾವಕಾಶದ ಕೊರತೆ ಇರುವುದನ್ನು ಸಭೆಯು ಅವಲೋಕಿಸಿ ಜಿಲ್ಲೆಯ ಉಗ್ರಾಣಗಳಲ್ಲಿ ಸುಮಾರು 2 ವರ್ಷಗಳಿಂದ ದಾಸ್ತಾದಲ್ಲಿರುವ ತೊಗರಿ ಉತ್ಪನ್ನವನ್ನು ವಿಲೇವಾರಿ ಮಾಡಲು ಸಕರ್ಾರದ ಹಂತದಲ್ಲಿ ಕ್ರಮ ಜರುಗಿಸಲು ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಸಾಗಣಿಕೆ ಕುರಿತು:
ವಿಜಯಪುರ ಜಿಲ್ಲೆಯ ಉಗ್ರಾಣಗಳಲ್ಲಿ ತೊಗರಿ ಉತ್ಪನ್ನ ದಾಸ್ತಾನು ಇದ್ದು ಉಗ್ರಾಣಗಳಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ 2019-20ನೆ ಸಾಲಿನಲ್ಲಿ ಖರೀದಿಸಿದ ಉತ್ಪನ್ನವನ್ನು ಪ್ರಾದೇಶಿಕ ಹುಬ್ಬಳ್ಳಿ ರವರು ನೀಡಿದ ದಾಸ್ತಾನಿನ ವಿವರವನ್ನು ಪರೀಶೀಲಿಸಲಾಯಿತು. 200 ಕೀ.ಮೀ ಅಂತರದಲ್ಲಿ ದಾಸ್ತಾನು ಮಾಡಿದರು ಕೂಡ ಸ್ಥಳಾವಕಾಶದ ಕೊರತೆಯನ್ನು ಸಭೆಯಲ್ಲಿ ದೀಘ್ರವಾಗಿ ಚಚರ್ಿಸಲಾಯಿತು. ಹಾಗೂ ಸಾಗಾಣಿಕೆ ವ್ಯವಸ್ಥೆಯನ್ನು ಪಡೆದ ಗುತ್ತಿಗೆದಾರರು 2017-18ನೇ ಸಾಲಿನಲ್ಲಿ ಸರಿಯಾಗಿ ನಿರ್ವಹಣೆ ಆಗದೇ ಇರುವುದನ್ನು ಸಭೆಯಲ್ಲಿ ಪರಿಶೀಲಿಸಿ ಪ್ರಸಕ್ತ ಸಾಲಿನಲ್ಲಿ ಖರೀದಿಸಬಹುದಾದ ತೊಗರಿ ಉತ್ಪನ್ನವನ್ನು ಹೆಚ್ಚಿನ ವಾಹನಗಳನ್ನು ಪೂರೈಸಿ ಗುತ್ತಿಗೆದಾರರು ಸಮರ್ಪಕವಾಗಿ ಸಾಗಾಣಿಕೆ ಮಾಡಲು ವ್ಯವಸ್ಥಾಪಕ ನಿದರ್ೆಶಕರು, ಕೆ.ಎಸ್.ಡಿ ಎಮ್.ಎಫ್ ಬೆಂಗಳೂರು ಇವರಿಗೆ ನಿರ್ದೇಶನು ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಗ್ರೇಡರ್ ಹಾಗೂ ತೂಕದ ಯಂತ್ರ ಮತ್ತು ಚಾಣಿ ಪೂರೈಸುವ ಕುರಿತು:
ಜಿಲ್ಲಯಲ್ಲಿ ಪ್ರಾರಂಭವಾಗುವ ಪ್ರತಿ ಖರೀದಿ ಕೇಂದ್ರಗಳಿಗೆ ಒಬ್ಬರಂತೆ ಅನುಭವವುಳ್ಳ ಗ್ರೇಡರಗಳನ್ನು ನೇಮಿಸಬೇಕೆಂದು ನಾಪೆಡ್ ಸಂಸ್ಥೆಗೆ ತಿಳಿಸಲು ಸೂಚಿಸಲಾಯಿತು. ತೂಕದ ಯಂತ್ರ ಮತ್ತು ಚಾಣಿಗಳನ್ನು ನಿರ್ವಹಿಸಿದ ಪ್ರಕಾರವೇ ಸಂಬಂಧಪಟ್ಟ ಸಂಸ್ಥೆಗಳೇ ತಮ್ಮ ಸಂಪನ್ಮೂಲಗಳಿಂದ ವೆಚ್ಚವನ್ನು ಭರಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ ಸಹಾಯಕ ನಿರ್ದೇ ಶಕ ಎ.ಬಿ ಚಬನೂರ ಸ್ವಾಗತಿಸಿ ತೊಗರಿ ಬೆಳೆ ಬೇಡಿಕೆ ಬಗ್ಗೆ ಖರೀದಿ ಕೇಂದ್ರಗಳ ಸ್ಥಾಪನೆ ಬಗ್ಗೆ ಅವಶ್ಯಕ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಪ್ರಸನ್ನ, ಕೃಷಿ ಜಂಟಿ ನಿರ್ದೇಶಕ ಶಿವಕುಮಾರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.