ವಿಜಯಪುರ: ಲೆದರ್ಬಾಲ್ ಕ್ರಿಕೆಟ್ ಪಂದ್ಯಾವಳಿ

ವಿಜಯಪುರ 23: ಸ್ಫೂರ್ತಿ, ಕ್ರೀಡಾ ಮನೋಭಾವ, ಪರಿಶ್ರಮದಿಂದ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಫೆಡರೇಶನ್ ರಾಷ್ಟ್ರೀಯ ಅಧ್ಯಕ್ಷ ಡಾ.ಜಾವೀದ್ ಜಮಾದಾರ್ ಹೇಳಿದರು. 

ನಗರದ ಕನಕದಾಸ ಬಡಾವಣೆ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬುಲ್ಸ್ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಲೆದರ್ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. 

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಜಿ. ಲೋಣಿ, ದೇವರಹಿಪ್ಪರಗಿ ಪಂಚಾಯಿತಿ ಸದಸ್ಯ ಹಾಗೂ ಪ್ರಾಯೋಜಕ ಬಸೀರ್ಶೇಠ ಬೇಪಾರಿ, ಅಂತಾರಾಷ್ಟ್ರೀಯ ಕ್ರಿಕೆಟ್ಪಟು ಹಾಗೂ ಕೋಚ್ ರವಿ ಭರತಖಾನೆ, ಬುಲ್ಸ್ ಕ್ರಿಕೆಟ್ ಅಕಾಡಮಿ ಮಾಲೀಕ ಜಾಕೀರ್ ನಾಯ್ಕೋಡಿ, ಇಮ್ತಿಯಾಜ್ ಫೈರೋಜಾಬಾದ್, ವಕಾರ್ ಪೀರಜಾದೆ ಉಪಸ್ಥಿತರಿದ್ದರು.