ವಿಜಯಪುರ: ಆತ್ಮರಕ್ಷಣೆಗೆ ಕರಾಟೆ ತರಬೇತಿ ಅತ್ಯುತ್ತಮ ಅಸ್ತ್ರ: ಡಾ.ಜಾವಿದ

ಲೋಕದರ್ಶನ ವರದಿ ವಿಜಯಪುರ 08: ತುರ್ತು ಸಂದರ್ಭದಲ್ಲಿ ಆತ್ಮರಕ್ಷಣೆ ಮಾಡಿಕೊಳ್ಳಲು ಕರಾಟೆ ತರಬೇತಿ ಪಡೆದುಕೊಳ್ಳಬೇಕು. ಸ್ವಯಂ ರಕ್ಷಣೆಗೆ ಕರಾಟೆ ಒಂದು ಅತ್ಯುತ್ತಮ ಅಸ್ತ್ರ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಫೆಡರೇಶನ್ ರಾಷ್ಟ್ರೀಯ ಅಧ್ಯಕ್ಷ ಡಾ.ಜಾವಿದ ಜಮಾದಾರ ಹೇಳಿದರು. ವಿಜಯಪುರ ಆನಂದ ನಗರದ ಭಾವಸಾರ ಕ್ಷತ್ರೀಯ ಸಮುದಾಯ ಭವನದಲ್ಲಿ ಬೆಸ್ಟ್ ಮಾರ್ಶಲ್ ಅರ್ಟ ಅಕಾಡೆಮಿಯಿಂದ ನಡೆದ ಅಂತರರಾಷ್ಟ್ರ ಮಟ್ಟದ ಕರಾಟೆ ಕಲೆ ಮತ್ತು ಆತ್ಮ ರಕ್ಷಣೆಯ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಸ್ಪಧಾತ್ಮಕ ಯುಗದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಆತ್ಮಸ್ಥೈರ್ಯ ಪಡೆಯಲು ಕರಾಟೆ ಬಹಳ ಸಹಕಾರಿ. ಹೆಣ್ಣು ಮಕ್ಕಳು ಆಯುಧ ಇಲ್ಲದೆ ಕರಾಟೆಯಿಂದ ತಮ್ಮ ಸ್ವಯಂ ರಕ್ಷಣೆ ಮಾಡಿಕೊಳ್ಳಬಹುದು. ಪಾಲಕರು ತಮ್ಮ ಮಕ್ಕಳಿಗೆ ಆತ್ಮ ರಕ್ಷಣೆಯ ತರಬೇತಿಯನ್ನು ನೀಡಬೇಕು. ಹಾಗು ಸರಕಾರ ಎಲ್ಲ ಶಾಲಾ-ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿಯನ್ನು ಕಡ್ಡಾಯಗೊಳಿಸಬೇಕೆಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾನಗರ ಪಾಲಿಕೆ ಮಾಜಿ ಮಹಾಪೌರ ರಾಜೇಶ ದೇವಗಿರಿ ಮಾತನಾಡಿ, ವಿದ್ಯಾರ್ಥಿಗಳು ಸ್ವಾರ್ಥ ಭಾವನೆಯಿಟ್ಟುಕೊಳ್ಳದೆ. ಸತತ ಪರಿಶ್ರಮದಿಂದ ಏನಾದರೂ ಸಾಧನೆ ಮಾಡಬಹುದು. ಒಳ್ಳೆಯ ನಡತೆ ಹಾಗೂ ಉತ್ತಮ ಜೀವನ ಶೈಲಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಕರಾಟೆಯಂತಹ ಕಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕೆಂದರು. ಇದೇ ಸಂದರ್ಭದಲ್ಲಿ ವಿವಿಧ ರೀತಿಯ ಸ್ವಯಂ ರಕ್ಷಣಾ ಕಲೆಗಳನ್ನು ಪ್ರದರ್ಶಿಸಲಾಯಿತು. ಕರಾಟೆ ಪರೀಕ್ಷೆಯಲ್ಲಿ ಉತ್ತೀರ್ಣರಾದ 152 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಕರಾಟೆ ಬೆಲ್ಟ್ ವಿತರಿಸಲಾಯಿತು. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಕರಾಟೆ ಪಟುಗಳನ್ನು ಸನ್ಮಾನಿಸಲಾಯಿತು. ಹುಬ್ಬಳ್ಳಿಯ ಅಂತರರಾಷ್ಟ್ರೀಯ ಕರಾಟೆ ತರಬೇತಿದಾರ ಅಣ್ಣಪ್ಪ ಮಾರಕಲ್ ಅಂತರಾಷ್ಟ್ರೀಯ ಕರಾಟೆ ಪಟು ಕುಶಬು ಜೈನ, ಬೆಸ್ಟ ಮಾರ್ಶಲ ಆರ್ಟ ಅಕಾಡೆಮಿ ಮುಖ್ಯ ತರಬೇತುದಾರ ಜಗದೀಶ ಗುಳೇದಗುಡ್ಡ, ಉಪಸ್ಥಿತರಿದ್ದರು. ಆನಂದ ಬ್ಯಾಲಾಳ ಸ್ವಾಗತಿಸಿದರು. ಪ್ರಮೋದ ಹಡಪದ ವಂದಿಸಿದರು. ಸೃಷ್ಠಿ ಬಂಡಿ ನಿರೂಪಿಸಿದರು.