ವಿಜಯಪುರ 03: ಜಿಲ್ಲೆಯ ಅಪರೂಪದ ಸಂವೇದನಾಶೀಲ ಸಾಹಿತಿ, ದಲಿತ ಸಾಕ್ಷಿ ಪ್ರಜ್ಞೆಯಂತಿರುವ ಹಿರಿಯ ಪತ್ರಕರ್ತ ಅನಿಲ ಹೊಸಮನಿ ಅವರು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವದಕ್ಕೆ ಜಿಲ್ಲೆಯ ಚೆ ಗುವೆರಾ ಯೂಥ್ ಫೆಡರೇಶನ್ ಸಂಘಟನೆಯ ಅಧ್ಯಕ್ಷ ಹಾಗೂ ಯುವ ಸಾಹಿತಿ, ಪತ್ರಕರ್ತ ಮಂಜುನಾಥ.ಎಸ್.ಕಟ್ಟಿಮನಿ ಅಭಿನಂದಿಸಿದ್ದಾರೆ.
ವಿಜಯಪುರ ಜಿಲ್ಲೆಯ ಅನಿಲ ಹೊಸಮನಿಯವರು ಪತ್ರಿಕೋದ್ಯಮದ ಧರ್ಮವನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದವರು, ಪತ್ರಿಕೋದ್ಯಮದ ಎಲ್ಲ ನೋವು ನಲಿವುಗಳನ್ನು ಕಂಡುಂಡವರು, ಯಾವುದೇ ವಶೀಲಿಬಾಜಿ ಮಾಡದವರು.
ಇಂತಹ ನಿಜವಾದ ಸಾಧಕರನ್ನು ಗುರುತಿಸಿ ಸರ್ಕಾರ ಈ ಬಾರಿ ಆಯ್ಕೆ ಮಾಡಿರುವುದರಿಂದ ಅಕಾಡೆಮಿಯ ಗೌರವ ಇಮ್ಮಡಿಯಾಗಿದೆ. ಅದಕ್ಕಾಗಿ ಜಿಲ್ಲೆಯ ಎಲ್ಲ ಹಿರಿಯ, ಕಿರಿಯ ಪತ್ರಕರ್ತರು ಹಾಗೂ ಸಾಹಿತಿಗಳ ಪರವಾಗಿ ಹಾರ್ದಿಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.