ಲೋಕದರ್ಶನ ವರದಿ
ವಿಜಯಪುರ 13: ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಇಸ್ರೋ ಸಾಧನೆ, ಬಾಹ್ಯಾಕಾಶ ವಿಜ್ಞಾನ ಕುರಿತು ಮಹತ್ವ ತಳಿಹೇಳುವ ವಿವಿಧ ಕಾರ್ಯಕ್ರಮಗಳನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದು ಯು.ಆರ್. ರಾವ್ ಉಪಗ್ರಹ ಕೇಂದ್ರದ ಉಪನಿದರ್ೇಶಕ ಡಾ.ಅಲೋಕ್ಕುಮಾರ ಶ್ರೀವಾತ್ಸವ್ ಹೇಳಿದರು.
ನಗರದ ಬಿ.ಎಲ್.ಡಿ.ಇ ಕಾಲೇಜಿನಲ್ಲಿ ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ.ವಿಕ್ರಮ ಸಾರಾಭಾಯಿ ಜನ್ಮಶತಮಾನೋತ್ಸವ ಅಂಗವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಬಿ.ಎಲ್ಡಿ.ಇ ಸಂಸ್ಥೆಯ, ಜಿಲ್ಲಾಡಳಿತ, ಪದವಿಪೂರ್ವ ವೃತ್ತಿಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಇಂಜನಿಯರಿಂಗ್ ಕಾಲೇಜ್ ಆವರಣದಲ್ಲಿ ಇಂದು ಬೆಳಿಗ್ಗೆ 9-30 ರಿಂದ ಸಂಜೆ 5 ಗಂಟೆಯ ವರೆಗೆ ಇಸ್ರೋ ಸಾಧನೆಯ ಪ್ರಾತ್ಯಕ್ಷಿಕೆಗಳು, ವಿಜ್ಞಾನಿಗಳೊಂದಿಗೆ ಸಂವಾದ, ವಿಡಿಯೋ ಪ್ರದರ್ಶನ, ವಸ್ತು ಪ್ರದರ್ಶನ ಹಾಗೂ ಸೆಲ್ಫಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಮಕ್ಕಳು ವೀಕ್ಷಿಸಲು ಸದಾವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಬಾಹ್ಯಾಕಾಶ ವಿಜ್ಞಾನಿಗಳಾದ ಡಾ.ನಾಗೇಂದ್ರ, ವಿಲಾಸ ರಾಠೋಡ, ಶ್ರೀನಿವಾಸ ಅವರು ಮಾತನಾಡಿ ಇಸ್ರೋ ದಿಂದ ಜಿಲ್ಲೆಗೆ 20 ವಿಜ್ಞಾನಿಗಳು ಆಗಮಿಸಿದ್ದು, ಜಿಲ್ಲೆಯ ಶಾಲಾ ಕಾಲೇಜ್ ಮಕ್ಕಳು, ಶಿಕ್ಷಕರು, ಪಾಲಕರು ಹಾಗೂ ಆಸಕ್ತರಿಗೆ ಸಂವಾದ ಕಾರ್ಯಕ್ರಮ ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದ್ದು, ಇಲ್ಲಿಯ ವಿದ್ಯಾರ್ಥಿಗಳ ಜೊತೆಗೆ ಗ್ರಾಮಿಣ ಪ್ರದೇಶಗಳ ವಿದ್ಯಾರ್ಥಿಗಳಿಗೂ ಬಾಹ್ಯಾಕಾಶ ವಿಜ್ಞಾನದ ಮಹತ್ವದ ಬಗ್ಗೆ ತಿಳಿಹೇಳುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೊಷ್ಟಿಯಲ್ಲಿ ಬಿ.ಎಲ್.ಡಿ.ಇ ಇಂಜನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ಪ್ರೋ.ಡಾ.ಅತೂಲ್ ಆಯರೆ ಮಾತನಾಡಿದರು. ಈ ಕಾರ್ಯಕ್ರಮದ ಅಂಗವಾಗಿ ದಿ.14-02-2020 ರಂದು ಬೆಳಿಗ್ಗೆ 8-30 ಗಂಟೆಗೆ ವಸ್ತು ಪ್ರದರ್ಶನ, ಬೆಳಿಗ್ಗೆ 9 ಗಂಟೆಗೆ ಮುಖ್ಯ ಸಮಾರಂಭ ಉದ್ಘಾಟನೆಯು ಕಾಲೇಜಿನ ಗ್ರಂಥಾಲಯ ಕಟ್ಟಡದಲ್ಲಿ ನಡೆಯಲಿದೆ. ನಂತರ ಡಾ.ಆರ್.ಆರ್ ನವಲಗುಂದ ಅವರಿಂದ, ಡಾ.ಆಲೋಕ್ ಶ್ರೀವಾತ್ಸವ್ ಅವರಿಂದ ಮಕ್ಕಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಸಂವಾದ, ವಿವಿಧ ಪ್ರದರ್ಶನಗಳು ನಂತರ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.
ಬಾಹ್ಯಾಕಾಶ ವಿಜ್ಞಾನಿಗಳಾದ ಶ್ರೀದೇವಿ, ಶ್ರೀಧರ, ಶ್ರೀನಿವಾಸ, ರಮಣರೆಡ್ಡಿ, ಗುರುಮುರ್ತಿ ಹಾಗೂ ಇತರರು ಉಪಸ್ಥಿತರಿದ್ದರು.