ಲೋಕದರ್ಶನ ವರದಿ
ವಿಜಯಪುರ 29: ಎನ್ಟಿಪಿಸಿ ಕೂಡಗಿ ವತಿಯಿಮದ ಕೊಡಮಾಡಿದ 50 ಕೆವ್ಹಿಎ ಡಿಸೇಲ್ ಜನರೇಟರನ್ನು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಇಂದು ನಗರದ ಕೇಂದ್ರಿಯ ವಿದ್ಯಾಲಯದಲ್ಲಿ ಚಾಲನೆ ನೀಡಿದರು.
ಕೂಡಗಿ ಎನ್.ಟಿ.ಪಿಸಿ ಸಿ.ಎಸ್.ಆರ್ ಕಾರ್ಯಕ್ರಮದ ಅಡಿಯಲ್ಲಿ 7.5 ಲಕ್ಷ ರೂ.ಗಳ ವೆಚ್ಚದಲ್ಲಿ ನೀಡಲಾಡ ಈ ಜನರೇಟರ್ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಹಾಯವಾಗಲಿದೆ. ಈ ವಿದ್ಯಾಲಯಕ್ಕೆ ತುರ್ತು ಅವಶ್ಯವಿರುವ ಜನರೇಟರನ್ನು ಎನ್ಟಿಟಿಸಿ ವತಿಯಿಂದ ನೀಡಿರುವುದು ಸಂತಸದ ವಿಷಯ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕೂಡಗಿ ಎನ್ಟಿಪಿಸಿ ವತಿಯಿಂದ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಿ.ಎಸ್.ಆರ್ ಕಾರ್ಯಕ್ರಮದ ಅಡಿಯಲ್ಲಿ ಅನೇಕ ರೀತಿಯಲ್ಲಿ ನೆರವಾಗುತ್ತಿದೆ. ಜಿಲ್ಲಾ ಆಸ್ಪತ್ರೆ, ವಿವಿಧ ತಾಲೂಕುಗಳು ಮತ್ತು ಕೇಂದ್ರಿಯ ವಿದ್ಯಾಲಯಕ್ಕೆ ಈ ರೀತಿಯ ವಿವಿಧ ಸೌಕರ್ಯಗಳನ್ನು ಒದಗಿಸಿ ಸಮಾಜಪರ ಕಾರ್ಯನಿರ್ವಹಿಸುತ್ತಿದೆ. ಈ ವಿದ್ಯಾಲಯದಲ್ಲಿ ವಿಜಯಪುರ ಸೇರಿದಂತೆ ಭಾರತದ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳಿಗೆ ಅವರ ವಿದ್ಯಾಬ್ಯಾಸದ ಅನುಕೂಲಕ್ಕಾಗಿ ಜನರೇಟರ ಒದಗಿಸಿರುವುದಕ್ಕೆ ಎನ್ಟಿಪಿಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ವಿದ್ಯಾಲಯ ಹಾಗೂ ಮಕ್ಕಳ ಪಾಲಕರ ಪರವಾಗಿ ಅಭಿನಂದನೆ ಸಲ್ಲಿಸಿದರು.
ಎನ್ಟಿಪಿಸಿ ಕಾರ್ಯಕಾರಿ ನಿದರ್ೇಶಕರಾದ ರಾಜಕುಮಾರ ಅವರು ಮಾತನಾಡಿ, ಎನ್ಟಿಪಿಸಿ ಯೋಜನಾ ವ್ಯಾಪ್ತಿಯ ಸಿ.ಎಸ್.ಆರ್. ಅಡಿಯಲ್ಲಿ ನೆರವು ನೀಡಲಾಗುತ್ತಿವೆ ಇಲ್ಲಿಯ ಕೇಂದ್ರಿಯ ವಿದ್ಯಾಲಯದ ವಿದ್ಯುತ್ ಸಮಸ್ಯೆ ನೀಗಿಸಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆ, ನೃತ್ಯ ಪ್ರದಶರ್ಿಸಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಸಿ.ಬಿ.ಕೆಬ್ಯಾಸ್ಟಿನ್, ಎಲೆಕ್ಟ್ರಿಕ್ ನಿರ್ವಹಣಾ ವಿಭಾಗದ ಎ.ಜಿ.ಎಲ್.ಎಂ ಶ್ರೀನಾಥ,ಎಚ್.ಆರ್.ವಿಭಾಗದ ಎಚ್.ಒ.ಡಿ ಜಯ ನಾರಾಯಣ, ಹಿರಿಯ ವ್ಯವಸ್ಥಾಪಕ ಮಂಜುನಾಥ ಎಮ್.ಎಚ್, ಪಿ.ಎ.ಜಾನ್, ಸಚಿನ್ ಶಮರ್ಾ, ಮೂತರ್ಿ ಸೇರಿದಂತೆ ಇತರರು ಉಪಸ್ಥಿತರಿದ್ದರು.