ವಿಜಯಪುರ: ಸಾರ್ವಜನಿಕರಿಗೆ ಉಚಿತ ಯೋಗ ತರಬೇತಿ ಶಿಬಿರ

ಲೋಕದರ್ಶನ ವರದಿ

ವಿಜಯಪುರ 18: ಮನುಷ್ಯನ ಆರೋಗ್ಯಯುತ ಬದುಕಿಗೆ ದುಡ್ಡು ಮುಖ್ಯವಲ್ಲ, ಶಿಸ್ತು, ಏಕಾಗ್ರತೆ, ಗುರಿ ಸಾಧನೆಗೆ ಪೂರಕವಾಗಿರುವ ಯೋಗವನ್ನು ರೂಢಿಸಿಕೊಳ್ಳಲು ಸಾರ್ವಜನಿಕರಿಗೆ ಮನವರಿಕೆ ಮಾಡಬೇಕೆಂದು ನಿವೃತ್ತ ಜಿಲ್ಲಾ ನೋಂದಣಾಧಿಕಾರಿ ಎನ್.ಎಸ್.ಹೂವಿನಳ್ಳಿ ಸಲಹೆ ನೀಡಿದರು.

ನಗರದ ಬಸವೇಶ್ವರ ಕಾಲೋನಿಯ ಬಸವೇಶ್ವರ ದೇವಾಲಯ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ನಿವೃತ್ತ ನೌಕರರ ಸಂಘ ವಿಜಯಪುರ ಇವರಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವಯೋಗ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗಾಗಿ ಆಯೋಜಿಸಿರುವ ಉಚಿತ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

     ನಿವೃತ್ತ ಪ್ರಾಚಾರ್ಯ ಎಂ.ಎನ್.ದಿಂಡೂರ ಮಾತನಾಡಿ, ಪ್ರತಿಯೊಬ್ಬ ನಾಗರಿಕರು ದೇಶದ ಆಸ್ತಿಯಾಗಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಯೋಗ ರೂಢೀಸಿಕೊಳ್ಳಬೇಕು. ಯೋಗದಲ್ಲಿ ತೊಡಗಿಕೊಳ್ಳಬೇಕೆಂದು ಹೇಳಿದರು. 

     ಯೋಗ ಗುರುಗಳಾದ ಬಿ.ಎಂ.ಮಸಬೀನಾಳ ಅವರು ಯೋಗದ ಅರ್ಥ ವ್ಯಾಪ್ತಿ, ಯೋಗ ವ್ಯಾಖ್ಯೆಗಳು, ಯೋಗ ಪಥಗಳು ಹಾಗೂ ಯೋಗದ ನಿಯಮಗಳನ್ನು ತಿಳಿಸಿದರು.     

        ಶಿಬಿರದಲ್ಲಿ ಆರ್.ಎ.ಪಾಟೀಲ, ಕಕ್ಕಮರಿ, ಡಿ.ಬಿ.ಹಿರೇಕುರುಬರ, ನಾಗೇಶ ಡೋಣೂರ ಹಾಗೂ ಬಸವೇಶ್ವರ ಕಾಲೋನಿ, ವಿದ್ಯಾನಗರ ಹಾಗೂ ಗಚ್ಚಿನಕಟ್ಟಿ ಕಾಲೋನಿಯ ಯೋಗಾಸಕ್ತರು ಪಾಲ್ಗೊಂಡಿದ್ದರು.

ಭಾರತ ಸೇವಾದಳದ ಜಿಲ್ಲಾ ಸಂಘಟಕ ನಾಗೇಶ ಡಿ. ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಬಿ.ಹಿರೇಕುರಬರ ಸ್ವಾಗತಿಸಿದರು. ಎ.ಎಸ್.ಡೂಣೂರ ವಂದಿಸಿದರು.