ವಿಜಯಪುರ 25: ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಸಿಕ್ಯಾಬ ಯುನಾನಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ರಾಜೀವ ಗಾಂಧಿ ವಿಶ್ವವಿದ್ಯಾಲಯ ಹೊರಡಿಸಿರುವ ಪರೀಕ್ಷಾ ಪಲಿತಾಂಶದಲ್ಲಿ ಕಾಲೇಜಿನ ಡಾ.ಕೆ.ಎಂ.ಹಿನಾ ಫಾತೀಮಾ ಮೆಡಿಷನ್ & ಗೈನಾಕಾಲಾಜಿಸ್ಟ ವಿಭಾಗದಲ್ಲಿ ಪ್ರತಿಶತ 73.91 ಅಂಕಗಳೊಂದಿಗೆ ರಾಜೀವ ಗಾಂಧಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಅದರಂತೆ ಡಾ.ಝಿಯಾವುಲ್ ಹಕ್ ಮೆಡಿಷನ್ ವಿಭಾಗದಲ್ಲಿ 65.92 ಅಂಕಗಳೊಂದಿಗೆ ರಾಜೀವಗಾಂಧಿ ವಿಶ್ವ ವಿದ್ಯಾಲಯಕ್ಕೆ ದ್ವೀತಿಯ ಸ್ಥಾನ ಗಳಿಸಿದ್ದಾರೆ. ಇವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಸ್ ಎ ಪುಣೇಕರ, ಪ್ರಧಾನ ಕಾರ್ಯದರ್ಶಿ ಎ.ಎಸ್.ಪಾಟೀಲ, ಸಲಾವುದ್ದೀನ ಪುಣೇಕರ, ಪ್ರಾಚಾರ್ಯ ಡಾ. ಮೊಹಮ್ಮದ ಅಖೀಲ್ ಖಾದ್ರಿ ಉಪಪ್ರಾಚಾಯರ್ೆ ಡಾ. ಶಹಬಾಝ ಬಾನು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.