ವಿಜಯಪುರ: ಗುಂಡು ಹಾರಿಸಿ ದರೋಡೆಗೆ ವಿಫಲಯತ್ನ

ವಿಜಯಪುರ 02: ಹಾಡಹಗಲೇ ಗುಂಡು ಹಾರಿಸಿ ದರೋಡಗೆ ವಿಫಲಯತ್ನ ನಡೆಸಿರುವ ಘಟನೆ ವಿಜಯಪುರ ನಗರದ ಆಶ್ರಮ ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್ನಲ್ಲಿಂದು ನಡೆದಿದೆ.ಏಕಾಏಕಿ ಫೈನಾನ್ಸ್ಗೆ ನುಗ್ಗಿದ ನಾಲ್ವರು ದರೋಡೆಕೋರರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಹಣ ಹಾಗೂ ಚಿನ್ನಾಭರಣವಿಟ್ಟಿದ್ದ ಭದ್ರತಾ ಕಿಜೋರಿಯನ್ನು ತೆರೆಯುವಂತೆ  ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಸೈರನ್ ಭಟನ್  ಒತ್ತಿದ್ದಾರೆ. ಸೈರನ್ ಕೂಗಿಕೊಂಡ ಹಿನ್ನೆಲೆಯಲ್ಲಿ ಸಿಕ್ಕಿ ಬೀಳುತ್ತೇವೆ ಎಂಬ ಭಯದಿಂದ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸುದ್ದಿ ತಿಳಿದು ವಿಜಯಪುರ ಠಾಣೆ ಡಿವೈಎಸ್ಪಿ ನಾರಾಯಣ, ಸಿಪಿಐ ರವೀಂದ್ರ ನಾಯ್ಕೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಪಿಎಂಸಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.