ವಿಜಯಪುರ: ಕೆಲಸದ ಒತ್ತಡ ತಗ್ಗಿಸಲು ಸರಕಾರಕ್ಕೆ ನೌಕರರ ಮನವಿ

ಲೋಕದರ್ಶನ ವರದಿ

ವಿಜಯಪುರ 18: ಕೃಷಿ ಇಲಾಖೆಯಲ್ಲಿ ಕಳೆದ 33 ವರ್ಷಗಳಿಂದ ಸಿಬ್ಬಂದಿ ಭತರ್ಿ ಮಾಡಿಲ್ಲ. ಹೀಗಾಗಿ ಇದ್ದ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಜೊತೆಗೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಜವಾಬ್ದಾರಿ ಕೂಡಾ ಹೆಚ್ಚಾಗಿ ಮಾನಸಿಕ ಒತ್ತಡ ಹೆಚ್ಚಾಗಿದೆ ಎಂದು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ ಹೇಳಿದರು.

ಜಿಲ್ಲೆಯ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡ ಸರಕಾರಕ್ಕೆ ಮನವಿ ಅಪರ್ಿಸುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಾಯ್.ಎಸ್. ಪಾಟೀಲ ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಗೋವಿಂದ ರಡ್ಡಿ ಅವರಿಗೆ ಮನವಿ ಅಪರ್ಿಸಿ ಮಾತನಾಡುತ್ತಿದ್ದರು.

ಮುಂಗಾರು, ಹಿಂಗಾರು ಹಂಗಾಮುಗಳಲ್ಲಿ ರಿಯಾಯಿತಿಯಲ್ಲಿ ಬಿತ್ತನೆ ಬೀಜ ವಿತರಣೆ, ಮಣ್ಣಿನ ಸತ್ವ ಹೆಚ್ಚಿಸುವುದು, ಹನಿ ಮತ್ತು ತುಂತುರ ನೀರಾವರಿ ಘಟಕಗಳ ವಿತರಣೆ, ಕೃಷಿ ಯಾಂತ್ರಿಕರಣ, ರೈತಸಿರಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ, ಶೂನ್ಯ ಬಂಡವಾಳ ಕೃಷಿ, ಪಿ.ಎಂ. ಕಿಸಾನ, ಗುಣ ನಿಯಂತ್ರಣ, ಫಸಲ ಬೀಮಾ, ಬೆಳೆಹಾನಿ ಸಮೀಕ್ಷೆ ಜೊತೆಗೆ ಜಲಾನಯನ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜೊತೆಗೆ ಕಂದಾಯ ಇಲಾಖೆಯ ಬೆಳೆ ಸಮೀಕ್ಷೆ ಕೃಷಿ ಮಾರುಕಟ್ಟೆ ಇಲಾಖೆಯ ಕನಿಷ್ಠ ಬೆಂಬಲ ಬೆಲೆ ಯೋಜನೆ, ಅಂಕಿಸಂಖ್ಯೆ ಇಲಾಖೆಯ ಬೆಳೆ ಕಟಾವು ಪ್ರಯೋಗಗಳು, ಪಂಚಾಯತ ರಾಜ್ ಇಲಾಖೆಯ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೀಗೆ ವಿವಿಧ ಇಲಾಖೆಯ ಕೆಲಸಗಳನ್ನು ಕೃಷಿ ಇಲಾಖೆ ಸಿಬ್ಬಂದಿಗಳು ಮಾಡಬೇಕಿದೆ.  ಈಗ ಇರುವ ಕೆಲವೇ ಸಿಬ್ಬಂದಿಗಳಿಗೆ ಕೆಲಸ ಹೊರೆ ಹೆಚ್ಚಾಗಿದೆ ಕಾರಣ ಸಿಬ್ಬಂದಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು. 

ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ. ಶಿವಕುಮಾರ, ಉಪಕೃಷಿ ನಿದರ್ೇಶಕ ಪ್ರಕಾಶ ಚವ್ಹಾಣ, ರಾಘವೇಂದ್ರ, ಸಹಾಯಕ ಕೃಷಿ ನಿರ್ದೇಶಕರಾದ ಎಚ್.ಬಿ. ಪಡಸಲಗಿ, ಎಂ.ಎಚ್.ಯರಝರಿ, ಮಹಾದೇವಪ್ಪ ಯವೂರ, ಜಿ.ಎ.ಕುಲಕಣರ್ಿ, ಎಸ್.ಸಿ.ಪಾಟೀಲ, ಎ.ಪಿ.ಬಿರಾದಾರ, ಎಸ್.ಎ.ಇನಾಮದಾರ, ಎಸ್.ವಿ.ದೊಡಮನಿ, ಆರೀಫಾ ಅತ್ತಾರ, ಕೃಷಿ ಅಧಿಕಾರಿಗಳಾದ ಎಸ್.ಡಿ.ಭಾವಿಕಟ್ಟಿ, ಪೃಥ್ವಿ, ಎನ್.ಬಿ.ಪಾಟೀಲ, ರಾಜೇಶ್ವರಿ ನಾಡಗೌಡ, ಜಯಪ್ರದಾ ದಶವಂತ, ಬಿ.ಆರ್.ಬೊರಗಿ, ಟಿ.ಎ. ಸೋಲಾಪುರಕರ, ಲಕ್ಷ್ಮೀ ಕಾಮಗೊಂಡ ಸಹಾಯಕ ಕೃಷಿ ಅಧಿಕಾರಿಗಳಾದ ಅರವಿಂದ ಹೂಗಾರ, ಅಮರಪ್ಪ ಚಲವಾದಿ, ಸೋಮಶೇಖರ ಜತ್ತಿ, ಆರ್.ಎಂ.ಬಿದರಿ, ಜಿಲ್ಲಾ ಲಿಪಿಕ ನೌಕರರ ಸಂಘದ ಅಧ್ಯಕ್ಷ ಸುರೇಶ ಬಿರಾದಾರ, ಪದಾಧಿಕಾರಿ ಕಾಶಿಮಸಾಬ ಮಸಳಿ, ಪಿ.ಎಂ.ಪಾಟೀಲ, ಜುಬೇರ ಕೆರೂರ, ಅರ್ಜುನ ಲಮಾಣಿ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.