ವಿಜಯಪುರ: ನಾಟಕ ಸಮಾಜವನ್ನು ತಿದ್ದುವಂತಹ ಶಕ್ತಿ ಹೊಂದಿದೆ: ಮಹೇಶ

ಲೋಕದರ್ಶನ ವರದಿ

ವಿಜಯಪುರ 12: ನಾಟಕ ಸಮಾಜವನ್ನು ತಿದ್ದುವಂತಹ ಶಕ್ತಿ ಪಡೆದಿದೆ. ನಾಟಕಗಳು ಜನರನ್ನು ಸರಿದಾರಿಗೆ ಕರೆದೊಯ್ಯೋವ ಪ್ರಯತ್ನ ಮಾಡುವ ಕಾರ್ಯ ನಾಟಕಗಳು ಮಾಡುತ್ತಿದೆ. ಸಾರ್ವಜನಿಕರು ಹೆಚ್ಚು ಹೆಚ್ಚು ನಾಟಕಗಳನ್ನು ನೋಡಬೇಕು ಎಂದು ಕನ್ನಡ ಮತ್ತು ಸಂಸೃತಿ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.

ನಗರದ ಕಂದಗಲ್ ಹಣಮಂತರಾಯ ರಂಗಮಂದಿರಲ್ಲಿ, ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಕನ್ನಡ ಮತ್ತು ಸಂಸೃತಿ ಇಲಾಖೆ ಮತ್ತು ಶ್ರೀ ಸಿದ್ದೇಶ್ವರ ಶಿಕ್ಷಣ ಹಾಗೂ ಗ್ರಾಮಿಣಾಭಿವೃದ್ಧಿ ಸಂಸ್ಥೆ,ಕಲಗುರ್ಕಿ  ಇವರ ಸಂಯುಕ್ತಾಶ್ರಯದಲ್ಲಿ  ಏರ್ಪಡಿಸಲಾಗಿದ್ದ ಶಿವಸಂಚಾರ 19 ನಾಟಕೊತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಟಕ ಪ್ರದರ್ಶನಗಳು ಜನರಿಗೆ ಮನರಂಜನೆಯ ಜೊತೆಗೆ ನಾಟಕ ಪರಂಪರೆಯನ್ನು ಪರಿಚಯಿಸುವ ಹಾಗೂ ಜನರಿಗೆ ಸರಿದಾರಿಗೆ ತರುವಲ್ಲಿ ಸಹಕಾರಿಯಾಗಿದೆ. ನಾಟಕಗಳು ದೇಶದ ಪಾರಂಪರಿಕ ಹಾಗೂ ಸಂಸೃತಿಯ ಪ್ರತೀಕವಾಗಿದೆ ಎಂದು ಹೇಳಿದರು.

ರಂಗಭೂಮಿ ಹಿರಿಯ ಕಲಾವಿದ ಎಸ್.ಎಂ ಬೇಡಗಿ ಮಾತನಾಡಿ ನಾಟಕಕ್ಕೆ ಪ್ರೇಕ್ಷಕನೇ ಜೀವಾಳ, ಸಂಗೀತ ಕಲೆಗೆ ಯಾವ ಭಾಷೆ ಇಲ್ಲ, ಸಾಹಿತ್ಯಕ್ಕೆ ಸಾವಿಲ್ಲ, ಕಲಾವಿದರಿಗೆ ಜಾತಿ ಇಲ್ಲ ಹೀಗಾಗಿ ರಂಗಕಲಾವಿದರಿಗೆ ಪ್ರೋತ್ಸಾಹವೇ ಪ್ರೇಕ್ಷಕ ಇಂದು ಯುವಕರನ್ನು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮ ಉದ್ಘಾಟನೆಯ ನಂತರ ಶಿವಸಂಚಾರ ತಂಡದಿಂದ ಮೋಳಿಗೆ ಮಾರಾಯ್ಯ ನಾಟಕ ಪ್ರದರ್ಶನಗೊಂಡಿತು.ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಪುಸೃತ ಸಾಹಿತಿ ಸಂಗಮೇಶ ಬಾದಾಮಿ, ರಂಗಮೇಳ ಅಧ್ಯಕ್ಷ ಡಿ.ಎಚ್ ಕೋಲಾರ, ರಂಗಭೂಮಿ ನಟ ರವೀಂದ್ರ ಮೆಡೆಗಾರ, ರಂಗ ನಿರ್ದೇಶಕ ಮುತ್ತುರಾಜ ಸಂಕಣ್ಣವರ, ಯೋಗೆಂದ್ರ ಸಿಂಗ್, ಜಿ.ಎಸ್ ಕುಲಕಣರ್ಿ, ಸಿದ್ರಾಮಪ್ಪ ಬಿಜ್ಜರಗಿ, ಅಶೋಕ ಕಾಪ್ಸೆ, ಸೇರಿದಂತೆ ಇತರರಿದ್ದರು.ರಾಜಸೇಖರ ದೈವಾಡಿ ನಿರೂಪಿಸಿದರು.