ಲೋಕದರ್ಶನ ವರದಿ
ವಿಜಯಪುರ 18; ತನ್ನ ನಾಗರಿಕ ಕರ್ತವ್ಯವನ್ನು ನಿರ್ಲಕ್ಷಿಸಿದ ನಾಗರಿಕನಿಗೆ ಪ್ರಜಾಪ್ರಭುತ್ವವನ್ನು ಟೀಕಿಸುವ ಹಕ್ಕು ಇಲ್ಲ. ಪ್ರಜಾಪ್ರಭುತ್ವದ ಬುನಾದಿಯನ್ನು ಭದ್ರ ಪಡಿಸುವ ಶಿಸ್ತು, ಇತರರ ಅಭಿಪ್ರಾಯಗಳ ಬಗ್ಗೆ ಗೌರವ, ತಾಳ್ಮೆ ಮುಂತಾದ ಆರೋಗ್ಯಕರ ಗುಣ ವಿಶೇಷಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಸಂಸತ್ ಕಾರ್ಯಕಲಾಪದ ಬಗ್ಗೆ ಅರಿವು ಮೂಡಿಸಿಕೊಂಡು ಉತ್ತಮ ಸಂಸತ್ತು ರಚನೆಗೆ ಕಾರಣವಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜೆ.ಎಸ್.ಪೂಜೇರಿ ಕರೆ ನೀಡಿದರು.
ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ.ಪೂ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ "ಯುವ ಸಂಸತ್ತು" ಸ್ಪರ್ದೇಯನ್ನು ಸಸಿಗೆ ನೀರೂಣಿಸುವದರ ಮೂಲಕ ಉದ್ಘಾಟಿಸಿ ಮಾತನಾಡಿ "ಇಂದಿನ ವಿದ್ಯಾರ್ಥಿ ನಾಳಿನ ನಾಯಕ" ಆದ್ದರಿಂದ ಈ ಸ್ಪರ್ದೇಯ ಉಪಯೋಗ ಪಡೆದುಕೊಂಡು ಉತ್ತಮ ಸಂಸದೀಯ ಗುಣ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರೊ.ಗೀತಾ.ಕಟ್ಟಿ, ಪ್ರೊ.ಎಂ.ಎಸ್.ಮಾಲಿಪಾಟೀಲ, ಭಾಗ್ಯಲಕ್ಷ್ಮೀ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಎಸ್.ಸಿ.ತೊಳನೂರ ಕಾರ್ಯಕ್ರಮ ನಿರೂಪಿಸಿದರು. ಟಿ.ಬಿ.ಕಾರದಾನಿ. ಎಸ.ಆರ್.ಭುಯ್ಯಾರ, ಎಚ್.ಆಯ್.ಮಾಳಾಬಾಗಿ, ಸುಧೀರಗೌಡ.ಬಿರಾದಾರ, ವಿ.ಜಿ.ಕಿವುಡಜಾಡರ, ಹಾಗೂ ಕಾಲೇಜಿನ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.