ವಿಜಯಪುರ: ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

ಲೋಕದರ್ಶನ ವರದಿ

ವಿಜಯಪುರ 02: ಇದೇ ಮಾಚರ್್ 4ರಿಂದ ಮಾರ್ಚ  23ರವೆರೆಗೆ ನಡೆಯಲಿರುವ ದ್ವಿತೀಯ ಪಿ.ಯು ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಕಲುದಂತಹ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಅವಶ್ಯಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ 4- ಸಕರ್ಾರಿ, 27-ಅನುದಾನಿತ, 10-ಅನುದಾನ ರಹಿತ ಸೇರಿದಂತೆ ಒಟ್ಟು 41 ಪರೀಕ್ಷಾ ಕೇಂದ್ರಗಳನ್ನು ಪರೀಕ್ಷೆಗೆ ನಿಗದಿ ಪಡಿಸಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲೂ 200 ಮೀ. ವ್ಯಾಪ್ತಿಯಲ್ಲಿ 144 ಕಲಂರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಈ ಪರೀಕ್ಷಾ ಕೇಂದ್ರಗಳ ಸುತ್ತಲೂ ಅನುಮಾನಾಸ್ಪದವಾಗಿ ತಿರುಗಾಡುವುದು ಸೇರಿದಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಝರಾಕ್ಸ್ ಅಂಗಡಿ, ಸೈಬರ್ ಕೆಫೆ, ಕಂಪ್ಯೂಟರ್ ಸೆಂಟರ್, ಕೋಚಿಂಗ್ ಸೆಂಟರ್ಗಳನ್ನು ಬಂದ್ ಮಾಡಿಸಲು ಸಹ ಸಂಬಂಧಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಅದರಂತೆ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳ ವಿರುದ್ಧ ದಂಡ ಪ್ರಕ್ರಿಯೆ ಸಂಹಿತೆ 1973ರ ಸೆಕ್ಷನ್ 107 ಮತ್ತು 110ರ ಅಡಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 8 ಸೂಕ್ಷ್ಮ, 9 ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಈ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಮತ್ತು ಹೆಚ್ಚುವರಿಯಾಗಿ ವಿಶೇಷ ಜಾಗೃತ ದಳದ ಸದಸ್ಯರುಗಳನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಡ್ಡಾಯಗೊಳಿಸಲಾಗಿದೆ. ಪರೀಕ್ಷಾ ಕಾರ್ಯದಲ್ಲಿ ನಿರತರಾಗಿರುವ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ. ಕೇವಲ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮಾತ್ರ ಬೇಸಿಕ್ ಸೆಟ್ ಮೊಬೈಲ್ ಫೋನ್ನ್ನು ಬಳಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತದಿಂದ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ/ತಾಲೂಕಾ ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯಿಂದ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಬೇರೆ ಜಿಲ್ಲೆಯ ಇಬ್ಬರು ವಿಶೇಷ ಜಾಗೃತ ದಳದ ಸದಸ್ಯರನ್ನು ಹಾಗೂ ಪ್ರತಿ ತಾಲೂಕಿಗೆ ಮೂರು ಜನರ ಜಾಗೃತ ದಳದ ತಂಡ ಮತ್ತು ಜಿಲ್ಲಾ ಮಟ್ಟದಲ್ಲಿ ಮೂರು ಜನರ ಒಂದು ತಂಡ ರಚಿಸಲಾಗಿದೆ. ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿದರ್ೇಶಕರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಾರಿ ಪರೀಕ್ಷಾಥರ್ಿಗಳು ಪರೀಕ್ಷೆ ಮುಗಿಯುವವರೆಗೆ (3 ಗಂಟೆ 15 ನಿಮಿಷ) ಇರಲು ತಿಳಿಸಲಾಗಿದೆ. ಪರೀಕ್ಷೆಯ ಬಗ್ಗೆ ಗಾಳಿಸುದ್ಧಿ ಹಬ್ಬಿಸುವುದು, ನಕಲು ಮಾಡುವುದು ಸಹಕರಿಸುವುದು, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಪ್ರಯತ್ನಿಸುವ ಸಿಬ್ಬಂದಿ ಹಾಗೂ ಸಮಾಕ ಘಾತುಕ ಶಕ್ತಿಗಳ ಮೇಲೆ ನಿದರ್ಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷಾ ಅಕ್ರಮಗಳು ನಡೆದ ಬಗ್ಗೆ ಕಂಡು ಬಂದಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸಾಮೂಹಿಕ ಹೊಣೆಗಾರರನ್ನಾಗಿಸಿ, ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುವ ಅವಧಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಅನ್ಯ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ವಿಜಯಪುರ ಇಲ್ಲಿ ಪರೀಕ್ಷೆ ಕುರಿತು ಸಹಾಯವಾಣಿ ತೆರೆಯಲಾಗಿದೆ. ಇದಕ್ಕಾಗಿ ಉಪನ್ಯಾಸಕರಾದ ಶ್ರೀ ಬಿ.ಎಸ್ ಗೌರಿ (9448186493) ಮತ್ತು ಶ್ರೀ ಎಸ್.ಸಿ ತೋಳನೂರ (9449437773) ಇವರನ್ನು ಸಂಪಕರ್ಿಸಲು ಅವರು ತಿಳಿಸಿದ್ದಾರೆ.

ಸ್ವಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಕೆಎಸ್ಆರ್ಟಿಸಿ, ನಗರ ಸಾರಿಗೆ ವಾಹನವನ್ನು ಬಳಸಬಹುದಾಗಿದೆ. ಈ ಪರೀಕ್ಷೆಗೆ ಹೊಸದಾಗಿ 23738, ಪುನರಾವತರ್ಿತ 2630 ಖಾಸಗಿ 991 ಒಟ್ಟು 27,359 ಅಭ್ಯಥರ್ಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 15972 ಬಾಲಕರು ಹಾಗೂ 11387 ಬಾಲಕಿಯರು ಹಾಜರಾಗಲಿದ್ದಾರೆ. ಕಲಾ ವಿಭಾಗದ 14572, ವಾಣಿಜ್ಯ ವಿಭಾಗದ 4803 ಹಾಗೂ ವಿಜ್ಞಾನ ವಿಭಾಗದ 7984 ಅಭ್ಯಥರ್ಿಗಳು ಸಂಯೋಜನೆವಾರು ಹಾಜರಾಗಲಿದ್ದಾರೆ. ಕಾಲೇಜುವಾರು ಸಕರ್ಾರಿ-6075, ಖಾಸಗಿ ಅನುದಾನಿತ-10025, ಅನುದಾನ ರಹಿತ -10230 ಹಾಗೂ ಪದವಿಯಿಂದ ಬೇರ್ಪಟ್ಟ 1029 ವಿದ್ಯಾಥರ್ಿಗಳು ಕಾಲೇಜುವಾರು ಹಾಜರಾಗಲಿರುವ ವಿದ್ಯಾಥರ್ಿಗಳಾಗಿದ್ದಾರೆಂದು ತಿಳಿಸಿದ್ದಾರೆ.