ವಿಜಯಪುರ 28: ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸಿ ಫಲಿತಾಂಶ ಸುಧಾರಣೆಯಲ್ಲಿ ಉಪನ್ಯಾಸಕರುಗಳ ಪಾತ್ರ ಎಷ್ಟು ಮುಖ್ಯವೋ, ಅಷ್ಟೇ ವಿದ್ಯಾರ್ಥಿಗಳ, ಪಾಲಕರ ಪಾತ್ರವು ಅತ್ಯಂತ ಮಹತ್ವದ್ದು, ಉತ್ತಮ ಫಲಿತಾಂಶದ ದೃಷ್ಟಿಯಿಂದ ಹಮ್ಮಿಕೊಂಡಿರುವ ಈ ಎರಡು ದಿನಗಳ ಶಿಬಿರವು ಅತ್ಯಂತ ಸಮಯೋಚಿತವಾದದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಮಾಚಿ ಸಚಿವರು ಹಾಗೂ ಶಾಸಕ ಎಂ.ಸಿ.ಮನಗೂಳಿ ಕರೆ ನೀಡಿದರು.
ಪ್ರಾಧ್ಯಾಪಕ ಪ್ರೊ.ಬಿ.ಎನ್.ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಎಸ್.ಎ.ಪಾಟಿಲ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯಮಟ್ಟದ ತರಬೇತಿಯಲ್ಲಿ ಭಾಗವಹಿಸಿದ ಪ್ರೊ.ಎಸ್.ಎಸ್.ಸಿದರಡ್ಡಿ, ಪಿ.ಜಿ.ಘಿರಡಿ, ಲಕ್ಷ್ಮೀನರಸಯ್ಯ ಹಾಗೂ ಇನ್ನಿತರು ಭಾಗವಹಿಸಿದ್ದರು. ಸುಮಾರು 250 ಜನ ಉಪನ್ಯಾಸಕರು ಹಾಜರಿದ್ದು ತರಬೇತಿ ಕಾರ್ಯಾಗಾರದ ಲಾಭವನ್ನು ಪಡೆದುಕೊಂಡರು.