ವಿಜಯಪುರ: ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆ

ಲೋಕದರ್ಶನ ವರದಿ

ವಿಜಯಪುರ 29: ವಿಶೇಷ ಘಟಕ ಯೋಜನೆಯಡಿ 2019-20 ನೇ ಸಾಲಿನ ರೆಡಿಮೇಡ ಗಾಮರ್ೆಂಟ್ಸ್ (ಮ್ಯಾನುಪ್ಯಾಕ್ಟರಿಂಗ್ ಆಫ್ ಲೇಡಿಜ್ ಹೈಜೆನಿಕ್ ನ್ಯಾಪಕೀನ್ ಪ್ಯಾಡ್ಸ್) ತಯಾರಿಕಾ ಘಟಕವನ್ನು ನಗರದ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸಲು ಕ್ರಿಯಾ ಯೋಜನೆಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅನುಮೋದನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ   ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ವಿವಿಕೆ ಪ್ರೋಡಕ್ಷನ್ ಯುನಿಟ್ ಅಜರ್ಿದಾರರು ಸಲ್ಲಿಸಿದ ಅಜರ್ಿಯನ್ನು ಪರಿಶೀಲಿಸಿ ಈ ರೆಡಿಮೇಡ್ ಗಾಮರ್ೆಂಟ್ಸ್ ಘಟಕಕ್ಕೆ ಅನುಮೋದನೆಯನ್ನು ನೀಡಲಾಯಿತು.

ಕೆ.ಐ.ಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಶಿವಗಿರಿ ಟಾಯರ್ಸ್ ಘಟಕದ ಹೆಸರು ಮತ್ತು ಚಟುವಟಿಕೆ ಬದಲಾವಣೆಗೆ ಸಂಬಂಧ ಪಟ್ಟಂತೆ ಅಜರ್ಿ ಪರಿಶೀಲಿಸಿ ಅನುಮೋದನೆ ನೀಡಲಾಯಿತು. ಸಿಂದಗಿ ತಾಲೂಕು ಸಣ್ಣಕೈಗಾರಿಕಾ ಉದ್ಯಮಿದಾರರ ಹಾಗೂ ಸೇವಾ ಸಂಸ್ಥೆಗಳ ಸಂಘ ಸಿಂದಗಿಯಲ್ಲಿ ನಿಮರ್ಾಣಗೊಂಡ ಕೈಗಾರಿಕಾ ವಸಾಹತುವಿನಲ್ಲಿ ನೀರಿನ ಪೂರೈಕೆ ಮತ್ತು ರಸ್ತೆಗಳ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. 

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿದರ್ೇಶಕ ಟಿ.ಸಿದ್ದಣ್ಣ ಅವಶ್ಯಕ ಮಾಹಿತಿ ನೀಡಿದರು. ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಸೋಮನಗೌಡ ಐನಾಪೂರ, ವಿಜಯಪುರ ಮತ್ತು ವಿವಿಧ ತಾಲೂಕಿನ ಕೈಗಾರಿಕಾ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.