ಲೋಕದರ್ಶನ ವರದಿ
ವಿಜಯಪುರ 02: ನಗರದ ಶ್ರೀ ಗುರುರಾಜ ಪಾದಯಾತ್ರೆ ಭಜನಾ ಮಂಡಳಿಯವರು ಪ್ರತೀ ವರ್ಷದಂತೆ ಈ ವರ್ಷವೂ ಸುಕ್ಷೇತ್ರ ಮಂತ್ರಾಲಯಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.
ಭಜನಾ ಮಂಡಳಿಯ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಇರುವ ಯುವಕರ ತಂಡ ಕಳೆದ 29 ವರ್ಷಗಳಿಂದ ಪಾದಯಾತ್ರೆ ಮೂಲಕ ಮಂತ್ರಾಲಯಕ್ಕೆ ಹೋಗುತ್ತಿದ್ದು, ದಾರಿಯುದ್ದಕ್ಕೂ ಭಕ್ತಿ ಭಾವದಿಂದ ಶುಚರ್ಿಭೂತರಾಗಿ ದೇವರ ನಾಮವನ್ನು ಸಂಗೀತ ತಾಳ ವಾದ್ಯದೊಂದಿಗೆ ಪಾದಯಾತ್ರೆಯಲ್ಲಿ ಸಾಗುವುದು ಒಂದು ವಿಶೇಷ.
ಕಲಿಯುಗದ ಕಾಮಧೇನು ನಂಬಿದ ಭಕ್ತರ ಕಲ್ಪವೃಕ್ಷ ಎಂದೇ ಖ್ಯಾತರಾಗಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಪ್ರಭುಗಳ ದರುಶನಕ್ಕೆ ಪಾದಯಾತ್ರೆಯ ಉದ್ದಕ್ಕೂ ತಲೆಯ ಮೇಲೆ ಮೃತ್ತಿಕಾ ವೃಂದಾವನನ್ನು ಇಟ್ಟುಕೊಂಡು, ಪ್ರತಿದಿನ ಅಷ್ಟೋತ್ತರ, ದೇವರ ನೈವೇದ್ಯ ಊಟ, ಸಂಜೆ ಭಜನೆ ಮಾಡುವ ಮೂಲಕ ವಿಶಿಷ್ಟ್ಯ ಪೂರ್ಣವಾಗಿ ನಡೆಯುವ ಈ ಯುವ ಪಡೆಯ ಪಾದಯಾತ್ರೆ ನಿಜಕ್ಕೂ ಎಲ್ಲರಿಗೂ ಮಾದರಿ ಎನ್ನಬಹುದು.
ಅದರಂತೆ ಗೋಪಾಲ ದೇಶಪಾಂಡೆ ಯವರ ಸಾರಥ್ಯದ ತಂಡ ಮಕರ ಸಂಕ್ರಮಣದ ದಿನವಾದ ಜನವರಿ 15 ರಂದು ವಿಜಯಪುರದಿಂದ ಪಾದಯಾತ್ರೆ ಹೊರಟು, ಮುತ್ತಗಿ, ಯಲಗೂರು, ಮುದ್ದೇಬಿಹಾಳ, ಜಿತಾಪುರ, ಲಿಂಗಸಗೂರು, ಕವಿತಾಳ, ಮಾನವಿ, ಬಿಚ್ಚಾಲೆ ಮುಖಾಂತರ ಸುಕ್ಷೇತ್ರ ಮಂತ್ರಾಲಯವನ್ನು ದಿ. 22 ರಂದು ತಲುಪಿದೆ. ತು. ಈ ತಂಡ ಕ್ರಮಿಸಿದ ಪಾದಯಾತ್ರೆಯ ದಾರಿ 290 ಕಿ.ಮೀ. ಈ ಪಾದಯಾತ್ರೆಯಲ್ಲಿ ಗುರುರಾಜ ಮನೋಜ ಶಹಾಪುರ ಎಂಬ 11 ವರ್ಷದ ಬಾಲಕ ಭಕ್ತಿ ಶ್ರದ್ಧೆಯಿಂದ ಭಾಗಹಿಸಿದ್ದು ವಿಶೇಷ. ನಗರದ ಸಂಗನಬಸವ ಶಿಶು ನಿಕೇತನ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕ ಮಂತ್ರಾಲಯಕ್ಕೆ ತೆರಳುತ್ತಿರುವುದು ಇದು ಮೂರನೆ ಪಾದಯಾತ್ರೆ.
ತನಗಿಂತ ಹಿರಿಯರ ಸಂಗಡ ಸರಿಸಾಟಿಯಾಗಿ ಭಜನೆ ಅಷ್ಟೋತ್ತರಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳುವ ಬಾಲಕ ಗುರುರಾಜನ ಶ್ರದ್ಧೆ-ಭಕ್ತಿಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಸೇರಿದಂತೆ ಅನೇಕರು ಪ್ರಶಂಸಿದ್ದಾರೆ.
ಈ ವರ್ಷದ ಪಾದಯಾತ್ರೆಯ ನೇತೃತ್ವವನ್ನು ಸಂಜೀವ ಜಹಗೀರದಾರ, ರಮೇಶ ಕುಲಕಣರ್ಿ, ಮನೋಜ ಶಹಾಪುರ, ಶ್ರೀನಿವಾಸ ಬೆಟಗೇರಿ, ವಿಜಯೀಂದ್ರ ನಾಮಣ್ಣ, ವೆಂಕಟೇಶ ಇಂಗಳೇಶ್ವರ, ರಾಮಚಂದ್ರ ಕುಲಕಣರ್ಿ, ವಾರೀಶ ಕುಲಕಣರ್ಿ, ವಿದ್ಯಾಧರ ಪುರೋಹಿತ ಮುಂತಾದವರು ವಹಿಸಿದ್ದರು.