ವಿಜಯಪುರ 03: ಇಲ್ಲಿನ ಪುಲಿಕೇಶಿ ನಗರದ ಜಗಜ್ಯೋತಿ ಬಸವೇಶ್ವರ (ಎಸ್ಜೆಬಿ) ಸಮೂಹ ಶಿಕ್ಷಣ ಸಂಸ್ಥೆಯ ಪದವಿ ಹಾಗೂ ಬಿ.ಈಡಿ. ಶಿಕ್ಷಣ ಮಹಾವಿದ್ಯಾಲಯದ ದಶಮಾನೋತ್ಸವ, ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಿಎಸ್ಸಿ ಕಾಲೇಜು ಉದ್ಘಾಟನೆ ಸಮಾರಂಭ ಇತ್ತೀಚೆಗೆ ನಡೆಯಿತು.
ಎಸ್.ಜೆ.ಬಿ. ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಎಸ್.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಘದ ಆಡಳಿತಾಧಿಕಾರಿ ಹಾಗೂ ಪ್ರಾಚಾರ್ಯ ಎಲ್.ಬಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ಕಾರ್ಯದಶರ್ಿ ಸಂತೋಷರಡ್ಡಿ ಪಾಟೀಲ ಉಪಸ್ಥಿತರಿದ್ದರು.
ಸಂಜೆ ಕನ್ನಡ ಕೋಗಿಲೆ ಸೀಜನ್-1ರ ರನ್ನರ ಅಪ್ ಅಖಿಲಾ ಪಜ್ಜು ಮನ್ನು ಹಾಗೂ ಚಿತ್ರನಟ ವಿಕ್ರಮ ಅವರಿಂದ ಸಂಗೀತ ಸಂಜೆ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಪಪೂ ಶಿಕ್ಷಣ ಇಲಾಖೆ ಉಪನಿದರ್ೆಶಕ ಜೆ.ಎಸ್. ಪೂಜೇರಿ, ಶಾಂತಿನಿಕೇತನ ಶಿಕ್ಷಣ ಸಂಸ್ಥೆ ನಿದರ್ೆಶಕ ಶರತ ಬಿರಾದಾರ, ಎಂ.ಆರ್. ಬಿಡಿಗೇರ, ರಾಜೇಶ ಪವಾರ ಆಗಮಿಸಿದ್ದರು.
ಶಿಕ್ಷಣ ಸಂಸ್ಥೆಯ ಎಲ್ಲ ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.