ವಿಜಯಪುರ: ಬಿಜೆಪಿ ಅವಧಿಯಲ್ಲಿ ದಲಿತ ಸಿಎಂ ನಿಶ್ಚಿತ; ಸಂಸದ ರಮೇಶ್ ಜಿಗಜಿಣಗಿ

ವಿಜಯಪುರ 31: ರಾಜ್ಯದಲ್ಲಿ ಬಿಜೆಪಿ ಅಧಿಕಾರವಧಿಯಲ್ಲಿ ದಲಿತ ಸಿಎಂ ಆಗುವುದು ನಿಶ್ಚಿತ. ಆದರೆ ಅದು ನಾನು ಇರುವಾಗ ಆಗುತ್ತದೆಯೋ ಅಥವಾ ನಾನು ಮೃತಪಟ್ಟ ನಂತರ ಆಗುತ್ತದೆಯೋ ಗೊತ್ತಿಲ್ಲ ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ. 

ಬಿಜೆಪಿಯಿಂದ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ. ರಾಜ್ಯದಲ್ಲಿ ದಲಿತ ಸಿಎಂ ಸ್ಥಾನ ಲಭಿಸುವುದಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. 

ಶ್ರೀರಾಮುಲು ಹಾಗೂ ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ, 'ನಮ್ಮನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡೀರಿ ಎಂದು ರಾಮುಲು ಹೇಳ್ತಾರೆ, ನಾನು ಕಾಂಗ್ರೆಸ್ ಬಿಟ್ಟು ಬಂದಿದ್ದಕ್ಕೆ ಬಿಜೆಪಿ ಸಕರ್ಾರ ರಚನೆಯಾಗಿದೆ ಎಂದು ಜಾರಕಿಹೊಳಿ ಈ ವಿವಾದಗಳು ನಡೆಯುವವೆ. ಇವೆಲ್ಲ ಹೊಸದೇನಲ್ಲ. ಹಿಂದೆಯೂ ಬೇರೆ ಬೇರೆ ಪಕ್ಷಗಳಲ್ಲಿ ಹೀಗೆ ಒತ್ತಡ ತರುವ ಕೆಲಸವಾಗಿದೆ. ವರಿಷ್ಠರು ಸಮರ್ಥರಿದ್ದಾರೆ. ಈ ಸಮಸ್ಯೆ ಬಗೆಹರಿಸುತ್ತಾರೆ' ಎಂದರು.