ಭಾರತ್ ಭೀಮ್ ಸೇನೆಗೆ ನೂತನ ಅಧ್ಯಕ್ಷರಾಗಿ ಶಶಿಧರ ಹೊಸಮನಿ ನೇಮಕ
ಯಲಬುರ್ಗಾ 09: ಪಟ್ಟಣದ ದಲಿತ ಯುವ ನಾಯಕ ಶಶಿಧರ ಹೊಸಮನಿ ಅವರನ್ನು ಭಾರತ್ ಭೀಮ್ ಸೇನೆಯ ನೂತನ ತಾಲೂಕಾಧ್ಯಕ್ಷರಾಗಿ ನೂತನ ನೇಮಕಗೊಳಿಸಿ ಸಂಘದ ರಾಜ್ಯಾಧ್ಯಕ್ಷ ದಿನೇಶಯವರು ಆದೇಶ ಹೊರಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
.ಸಂಘಟನೆಗೆ ಶ್ರಮಿಸುವೆ: ನನ್ನನ್ನು ಭಾರತ್ ಭೀಮ್ ಸೇನೆಗೆ ನೂತನವಾಗಿ ಅಧ್ಯಕ್ಷರಾಗಿ ನೇಮಕ ಮಾಡಿರುವ ಸಂಘದ ರಾಜ್ಯಾಧ್ಯಕ್ಷ ದಿನೇಶ ಹಾಗೂ ಜಿಲ್ಲಾಧ್ಯಕ್ಷ ವಿಜಯ ಜಕ್ಕಲಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತಾಲೂಕಿನಲ್ಲಿ ತಳಮಟ್ಟದಿಂದ ಈ ಘಟಕವನ್ನು ಸಂಘಟಿಸಿ ನೊಂದವರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಸಂಘದ ನಿಯಮಾವಳಿಗೆ ಬದ್ಧರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಬಲಿಷ್ಠ ಸಂಘಟನೆ ಕಟ್ಟುವ ಪ್ರಯತ್ನ ನಮ್ಮದಾಗಿದೆ. ಶೀಘ್ರದಲ್ಲಿ ಮಟ್ಟದ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ನಡೆಸಿದ್ದೇನೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ನೂತನ ಅಧ್ಯಕ್ಷ ಶಶಿಧರ ಹೊಸಮನಿ ಅವರು ತಿಳಿಸಿದರು.