ಬಂಥನಾಳ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹ್ಯಾಮ್ ರೇಡಿಯೋ ಸ್ಟೇಷನ್ ಅಳವಡಿಕೆ

Installation of Ham Radio Station at Murarji Desai Residential School, Banthanal

ಇಂಡಿ 09: ತಾಲ್ಲೂಕಿನ ಬಂಥನಾಳ ಮುರಾರ್ಜಿ ದೇಸಾಯಿ ವಸತಿ ಶಾಲೆ ಬಂಥನಾಳದಲ್ಲಿ ಹ್ಯಾಮ್ ರೆಡಿಯೋ ಸ್ಟೇಷನ್ ಸ್ಥಾಪಿಸಲಾಗಿದೆ ಇದು ವಿಶ್ವದ ಅನೇಕ ರಾಷ್ಟ್ರಗಳೊಂದಿಗೆ ಸಂವಾದವನ್ನು ಸಾಧಿಸಲು ಸಹಾಯವಾಗಿದೆ. ಇದು ಜಿಲ್ಲೆಯ ಮೊದಲ ಶಾಲೆಯಾಗಿದ್ದು ಇಲ್ಲಿನ ವಿಜ್ಞಾನ ಶಿಕ್ಷಕರಾದ ಶ್ರೀ ಬಾಬುರಾಯ ಕಣಮೇಶ್ವರ ಹಾಗೂ ಕುಮಾರ್ ಪರಮಾನಂದ ಕಿರಣಗಿ ಮತ್ತು ಪ್ರೇಮಾ ಪತ್ತಾರ್ ಇವರು ಲೈಸೆನ್ಸ್‌ ಪಡೆದವರಾಗಿದ್ದಾರೆ.  

ಭೂಕಂಪ ಸುನಾಮಿ ಹಾಗೂ ಇತರೆ ತುರ್ತು ಸಂದರ್ಭದಲ್ಲಿ ಸಂದೇಶವನ್ನು ರವಾನಿಸಲು ಉಪಯುಕ್ತವಾದ  ಸಂವಹನವಾಗಿದೆ ಎಂದು ಪ್ರಾಂಶುಪಾಲರಾದ ಸತೀಶ್ ಸಜ್ಜನ್ ಅವರು ಹೇಳಿದ್ದರು, ಹ್ಯಾಮ್ ಸ್ಟೇಷನ್ ಇಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹ್ಯಾಮ್ ಲೈಸೆನ್ಸ್‌ ಹೊಂದಿದವರ ಜೊತೆಗೆ ನಿರಂತರವಾಗಿ ಅಲ್ಲಿನ ವಾತಾವರಣ ಸಂಸ್ಕೃತಿ ವಿಜ್ಞಾನ ತಂತ್ರಜ್ಞಾನ ಕುರಿತು ಮಾತನಾಡಬಹುದಾಗಿದೆ ಮೊಬೈಲ್ ಅಂತರ್ಜಾಲ ಸಂಪರ್ಕ ನಿಂತಾಗ ನೈಸರ್ಗಿಕ ಅವಘಡಗಳು ಸಂಭವಿಸಿದಾಗ ತುರ್ತು ಸಂದರ್ಭದಲ್ಲಿ ಹ್ಯಾಮ್ ಲೈಸೆನ್ಸ್‌ ಪಡೆದವರ ನೆರವು ಪಡೆದು ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು.  

ವಿಜ್ಞಾನ ಶಿಕ್ಷಕರಾದ ಬಾಬುರಾಯ್ ಕಣ್ಣಮೇಶ್ವರ್ ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ರಾಜ್ಯದ 20 ವಸತಿ ಶಾಲೆಯಲ್ಲಿ ಅಳವಡಿಸಲಾಗಿದೆ ಇದರಿಂದ ಬಾಷಾ ಕೌಶಲ್ಯ ಹೆಚ್ಚುವುದರೊಂದಿಗೆ ಕೋಡ್ ವರ್ಡ್‌ ಬಳಕೆ ಮಾಡಿ ಸಂವಹನ ಮಾಡುವ ಅವಕಾಶ ಮಕ್ಕಳಿಗೆ ದೊರೆಯುತ್ತದೆ. ಇದೆಲ್ಲದಕ್ಕೂ ಕಾರಣಿಕರ್ತರಾಗಿರುವ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೇಜರ್ ಮಣಿವಣ್ಣನ್ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾದ ಕಾಂತುರಾಜ್ ಹಾಗೂ ಎಸ್ ಕೆ ಮಹದೇವ ಹಾಗೂ ಸತ್ಯಪಾಲ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.