ವಿಜಯಪುರ: ಗ್ರಾಹಕರ ವ್ಯವಹಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆ

ಲೋಕದರ್ಶನ ವರದಿ

ವಿಜಯಪುರ 23: ಜಿಲ್ಲೆಯಲ್ಲಿ ಅಂಗನವಾಡಿ ಕಡ್ಡಗಳಖ ದುರಸ್ತಿ ಕಾರ್ಯ, ನಿರ್ಗತಿಕ ಮಕ್ಕಳ ಕುಟೀರ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಡಿ ಅನುದಾನ ಪಡೆಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಮರ್ಪಕ ಕಾರ್ಯ ನಿರ್ವಹನಾ ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಳಳ ಅಭಿವೃದ್ಧಿ,ವಿಕಲ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಮತ್ತು ಆಹಾರ, ನಾಗರಿಕ ಸರಬರಾಜು  ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಮಹಿಳಾ ಮತ್ತು ಮಕ್ಳಳ ಅಭಿವೃದ್ಧಿ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಮತ್ತು ಆಹಾರ, ನಾಗರಿಕ ಸರಬರಾಜು ಮ್ತತು ಗ್ರಾಹಕರ ವ್ಯವಹಾರಗಳ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಜಿಲ್ಲೆಯಲ್ಲಿ ದುರಸ್ಥಿಯಲ್ಲಿರುವ ಎಲ್ಲ ಅಂಗನವಾಡಿ ಕಟ್ಟಡಗಳ ದುರಸ್ತಿ ಕಾರ್ಯ ತಕ್ಷಣ ಮುಗಿಸಬೇಕು ಈ ಕುರಿತು ವಯಕ್ತಿಕ ಗಮನ ಹರಿಸಬೇಕು. ನಿರ್ಗತಿಕ ಮಕ್ಕಳ ಕುಟೀರ ಯೋಜನೆಯಡಿ ಸಾಧಿಸಿದ ಪ್ರಗತಿ ಕುರಿತು ಪ್ರತಿ ಮಾಹೆ ವರದಿ ಸಲ್ಲಿಸಬೇಕು. ವಿವಿಧ ಸರ್ಕಾರದ ಅನುದಾನದಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಾ ಸಂಸ್ಥೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಯೋಜನೆಗಳ ಅಡಿ ಅನುದಾನ ಮಂಜೂರಾತಿಗೆ ಸಂಬಂಧಿಸಿದಂತೆ ಶಿಶು ಆಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಸಂಬಂಧಿಸಿದ ಅಧಿಕಾರಿಗಳು ಬರುವ ಫೆಬ್ರುವರಿ ಅಂತ್ಯದೊಳಗೆ ಪ್ರಗತಿ ಸಾಧಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ವಿಶೇಷ ಅಭಿವೃದ್ಧಿ ಯೋಜನೆ ಮತ್ತು ನರೇಗಾ ಅಡಿ ಅಂಗನವಾಡಿ ಕಟ್ಟಡಗಳ ನಿಮರ್ಾಣದಲ್ಲಿ ಸೂಕ್ತ ಪ್ರಗತಿ ಸಾಧಿಸಬೇಕು. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಲಾಭ ದೊರೆಯಲು ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ ತಪ್ಪದೇ ದೊರಕಿಸಬೇಕು. ಪೋಷಣ ಅಭಿಯಾನ ಕುರಿತು ಸೂಕ್ತ ಪ್ರಗತಿಯ ಜೊತೆಗೆ ಅರಿವು ಮೂಡಿಸಬೇಕು. ಸೀಮಂತ, ಪೌಷ್ಟಿಕ ಆಹಾರ ಶಿಬಿರ ಸೇರಿದಂತೆ ಮಕ್ಕಳ ಪೌಷ್ಠಿಕಾಂಶಗಳ ತಿಳವಳಕೆ ಕಾರ್ಯ ಚುರುಕುಗೊಳಿಸಿ ಜನೆವರಿ ಅಂತ್ಯಕ್ಕೆ ಗುರಿಗೆ ತಕ್ಕಂತೆ ಪ್ರಗತಿ ಸಾಧಿಸಬೇಕು.ಆಯಾ ತಾಲೂಕುವಾರು ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಜಿಲ್ಲೆಯಲ್ಲಿ ನೋಂದಾಯಿತ ಸ್ತ್ರೀ ಶಕ್ತಿ ಗುಂಪುಗಳ ಅಸ್ಥತ್ವ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಮಾತೃಶ್ರೀ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರಶಂಸೆ: 

ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕಾಂಶ ಆಹಾರ ದೊರಕಿಸುವ ಯೋಜನೆ ಪ್ರಾಯೋಗಿಕವಾಗಿ ಮತ್ತು ವ್ಯವಸ್ಥತವಾಗಿ ಜಾರಿಗೊಳಿಸುವದರೊಂದಿಗೆ ವಿವಿಧ ವೈದ್ಯರ, ಅಧಿಕಾರಿಗಳ ಸಮನ್ವಯ ಸಮಿತಿ ರಚಿಸಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ಯಶಸ್ವಿಗೊಳಿಸಿರುವುದಕ್ಕೆ ಜಿಲ್ಲಾಧಿಖಾರಿಗಳಿಗೆ ಅಭಿನಂದಿಸಿದ ಅವರು ಸಕರ್ಾರದಿಂದ ಮುಂದಿನ ದಿನಗಳಲ್ಲಿ ಅವಶ್ಯಕ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಅದರಂತೆ ವಿಕಲಚೇತನ ಫಲಾನುಭವಿಗಳಿಗೆ ಖಾಸಗಿ ಸಂಸ್ಥೆಗಳ ಮತ್ತು ಬಾಲಮಂದಿರಗಳಿಗೆ ವಿವಿಧ ವ್ಯಾಪಾರಸ್ಥರ ನೆರವು ಮೂಲಕ ನೆರವಾಗುತ್ತಿರುವ ಜಿಲ್ಲಾಧಿಕಾರಿಗಳ ಕ್ರಮಕ್ಕೆ ಸಂತಸ ಮತ್ತು ಪ್ರಶಂಸೆ ವ್ಯಕ್ತ ಪಡಿಸಿದರು. ಮುಂದಿನ ದಿನಗಳಲ್ಲಿ ಎಲ್ಲ ಯೋಜನೆಗಳಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸಲು ತಿಳಿಸಿದ ಪೋಷಣ ಅಭಿಯಾನದಡಿಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನ ಬರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ  ಇಲಾಖೆಯ  ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ), ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಅಲಗೂರ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.