ವಿಜಯಪುರ 25: ಗುಮ್ಮಟನಗರಿ ವಿಜಯಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಕ್ರೈಸ್ತ್ ಬಾಂಧವರು ಶ್ರದ್ಧಾ-ಭಕ್ತಿಯಿಂದ ಯೇಸುಕ್ರಿಸ್ತನ ಮೂತರ್ಿಗೆ ನಮನ ಸಲ್ಲಿಸಿ, ಕ್ಯಾಂಡಲ್ ಬೆಳಗಿ ಸ್ಮರಿಸಿದರು.
ವಿಜಯಪುರದ ಗಾಂಧಿಚೌಕ್ ಬಳಿ ಇರುವ ಸಂತ ಅನ್ನಮ್ಮ ಚರ್ಚ, ನಗರದ ಕೇಂದ್ರ ಬಸ್ ನಿಲ್ದಾಣ ಬಳಿ ಇರುವ ಸಿಎಸ್ಐ ಚರ್ಚ, ಸಕಾರೋಜಾ ಬಳಿ ಇರುವ ಮ್ಯಾಥೂಸ್ ಚರ್ಚ್ ಸೇರಿದಂತೆ ಹಲವಾರು ಚರ್ಚಗಳಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನಡೆಯಿತು.
ಗಾಂಧಿವೃತ್ತದ ಮುಂಭಾಗದಲ್ಲಿರುವ ಸಂತ ಅನ್ನಮ್ಮ ಚರ್ಚ್ ನಲ್ಲಿ .ಜಾನ್ ಮೊದಲಾದ ಧರ್ಮಗುರುಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಾವಿರಾರು ಕ್ರೈಸ್ತ್ ಸಮುದಾಯದವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.