ಲೋಕದರ್ಶನ ವರದಿ
ವಿಜಯಪುರ 23: ಮೈಸೂರಿನ ಪಿ ಕಾಳಿಂಗರಾವ್ ಗಾನ ಮಂಟಪದಲ್ಲಿ ಎಸ್.ಜಿ.ಎಸ್ ಇಂಟರನ್ಯಾಷನಲ್ ಯೋಗಾ ಫೌಂಡೇಶನ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಬೆಂಗಳೂರ ಇವರ ಸಹಯೋಗದಲ್ಲಿ ನಡೆದ ದಿನಾಂಕ: 19-01-2020 ರಲ್ಲಿ ನ್ಯಾಷನಲ್ ಯೋಗಾಸ ಸ್ಪೋಟ್ರ್ಸ ಚಾಂಪಿಯನ್ಶಿಪ್ ಇದರಲ್ಲಿ ಭಾಗವಹಿಸಿದ ವಿಪಸ್ಸನ್ ಯೋಗ ಸೇವಾ ಸಂಸ್ಥೆ ಪಡಾಗನೂರ ಇದರ ಎಂ.ಪಿ.ಡಿ ಆರಾಧ್ಯ ಯೋಗ ಮತ್ತು ಧ್ಯಾನ ತರಬೇತಿ ಕೇಂದ್ರ ವಿಜಯಪುರ ಇಲ್ಲಿಯ ಯೋಗಪಟುಗಳು ಭಾಗವಹಿಸಿ ಸಂಜನಾ ರಜಪೂತ, ಸುಕೃತಿ ದೇಶಪಾಂಡೆ, ವೀರೇಶ ಸೋನಾರ, ಶ್ರವಣಾ ಎ. ಪೂಜಾರಿ ವಯಕ್ತಿಕ ಯೋಗ ಸ್ಪಧರ್ೆ ಮತ್ತು ಅಥ್ಲೆಟಿಕ್ ಯೋಗ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರಾಜು ಮಾನೆ ದ್ವಿತಿಯ ಸ್ಥಾನವನ್ನು ಪಡೆದುಕೊಂಡಿದ್ದಾನೆ, ಪ್ರೀತಿ ಹಡಗಲಿ ತೃತಿಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ, ಅನುಪಮಾ ಚಿಂಚಲಿ ನಾಲ್ಕನೇ ಸ್ಥಾನವನ್ನು ಹಾಗೂ ಸಮರ್ಥ ರಜಪೂತ ಮತ್ತು ಮಂಜುನಾಥ ಇವರು 6ನೇ ಹಾಗೂ 8ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಥ್ಲೆಟಿಕ್ ಯೋಗ ಸ್ಪಧರ್ೆಯಲ್ಲಿ ಪ್ರಥಮ, ದ್ವಿತಿಯ, ತೃತಿಯ, ನಾಲ್ಕನೇಯ ಸ್ಥಾನವನ್ನು ಪಡೆದುಕೊಂಡ ಯೋಗ ಪಟುಗಳು ಥೈಲ್ಯಾಂಡ್, ಶ್ರೀಲಂಕಾ, ದುಬೈ ದೇಶಗಳಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ದೇಗಳಿಗೆ ಮತ್ತು ಅಂತರಾಷ್ಟ್ರೀಯ ಯೋಗ ಉತ್ಸವಗಳಿಗೆ ಆಯ್ಕೆಯಾಗಿದ್ದಾರೆ.
ಯೋಗಪಟುಗಳಿಗೆ ಯೋಗ ಶಿಕ್ಷಕ ಮಡಿವಾಳಪ್ಪ ಪ.ದೊಡಮನಿ ಉಚಿತವಾಗಿ ಯೋಗ, ಧ್ಯಾನ ಮತ್ತು ವ್ಯಕ್ತಿತ್ವ ವಿಕಸನದ ತರಬೇತಿಯನ್ನು ನೀಡುತ್ತಾರೆ. ಹಾಗೇ ವಿಜಯಪುರ ನಗರದ ಸಾರ್ವಜನಿಕ ಯುವ ಜನತೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಯೋಗ ಶಿಭಿರಗಳನ್ನು ನಡೆಸಿಕೊಡುತ್ತಾರೆ. ಅದಕ್ಕಾಗಿ ನಗರದ ಎಲ್ಲರೂ ಇದರ ಸದುಪಯೋಗ ತೆಗೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ. ವಿಜೇತರಾದ ಯೋಗಪಟುಗಳಿಗೆ ಜ್ಞಾನ ಯೋಗಾಶ್ರಮದ ಪೂಜ್ಯ ಬಸವಲಿಂಗ ಸ್ವಾಮೀಜಿ ಮತ್ತು ಪೂಜ್ಯ ಅಮೃತಾನಂದ ಸ್ವಾಮೀಜಿ, ಪೂಜ್ಯ ಬ್ರಹ್ಮಾನಂದ ಸ್ವಾಮೀಜಿ ಹಾಗೂ ಪೂಜ್ಯ ಪ್ರಜ್ಞಾನಂದ ಸ್ವಾಮೀಜಿಯವರು ಅಭಿನಂದಿಸಿ ಆಶೀರ್ವದಿಸಿದ್ದಾರೆ. ಸಮಾಜ ಸೇವಕರಾದ ಸುನೀಲ ಭೈರವಾಡಗಿ ಮತ್ತು ಅರುಣ ಕದಂ ಮತ್ತು ಆನಂದ ಭುತಡಾ, ಮಂಜುನಾಥ ಪಡಗಾನೂರ ಅಭಿನಂದಿಸಿದ್ದಾರೆ. ಎಂದು ವಿಪಸ್ಸನ್ ಯೋಗ ಸೇವಾ ಸಂಸ್ಥೆ ಪಡಗಾನೂರ, ಅಧ್ಯಕ್ಷರಾದ ಸಿ.ಎನ್ ದೊಡಮನಿ ತಿಳಿಸಿದ್ದಾರೆ.