ಲೋಕದರ್ಶನ ವರದಿ
ವಿಜಯಪುರ 13: ಐತಿಹಾಸಿಕ ವಿಜಯಪುರ ನಗರದ ಶಿವಾಜಿ ಪೇಠದಲ್ಲಿರುವ ಈಶ್ವರ ಮಂದಿರ ಸಾಂಸ್ಕೃತಿಕ ಭವನದಲ್ಲಿ ಮರಾಠಾ ಸಮಾಜದ ವತಿಯಿಂದ ರಾಷ್ಟ್ರಮಾತಾ ಜೀಜಾಮಾತೆಯ 422ನೇ ಜಯಂತಿಯನ್ನು ಶೈಲಜಾ ಬಸನಗೌಡ ಪಾಟೀಲ (ಯತ್ನಾಳ) ಜೀಜಾಮಾತೆಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಮಾಡುವ ಮೂಲಕ ಆಚರಿಸಲಾಯಿತು.
ನಂತರ ಪ್ರೀಯಾಂಕಾ ಪ್ರಕಾಶ ನಿಕ್ಕಮ ಇವರು ಛತ್ರಪತಿ ಶಿವಾಜಿ ಮಹಾರಾಜ ವೃತ್ತ ಮತ್ತು ಜೀಜಾಮಾತಾ ವೃತ್ತಕ್ಕೆ ಪೂಜೆ ನೆರವೇರಿಸಿದರು.
ಶೈಲಜಾ ಬಸನಗೌಡ ಪಾಟೀಲ (ಯತ್ನಾಳ) ಹಾಗೂ ಪ್ರೀಯಾಂಕಾ ಪ್ರಕಾಶ ನಿಕ್ಕಮ ಇವರು ಮಾತನಾಡಿ ಜೀಜಾಮಾತಾವು ತನ್ನ ಮಗ ಛತ್ರಪತಿ ಶಿವಾಜಿ ಮಹಾರಾಜರಿಗೆ ಬಾಲ್ಯದಲ್ಲಿ ರಾಮಾಯಣ-ಮಹಾಭಾರತ ದಂತಹ ಕಥೆಯಲ್ಲಿ ಬರುವ ಧೀರ, ವೀರ, ಶೂರ ಮಹಾಪುರುಷರ ಕಥೆಗಳನ್ನು ಹೇಳಿ ಸ್ವದೇಶಿ ಅಭಿಮಾನ ಹಿಂದವಿ ಸ್ವರಾಜ ಕಟ್ಟುವ ಒಂದು ಸಣ್ಣ ಕಿಡಿಯನ್ನು ಹೊತ್ತಿಸಿದರು. ಜೀಜಾಮಾತಾ ತಾಯಿಯ ಪ್ರಯತ್ನ ಇರದಿದ್ದಲ್ಲಿ ಇಡೀ ಭಾರತ ಖಂಡವು ಪರಕೀಯರ ಅನ್ಯಾಯ, ಅತ್ಯಾಚಾರ ದಾಳಿಗಳಿಗೆ ತುತ್ತಾಗಿ ಹಿಂದೂ ಧರ್ಮವು ನಾಮವಶೇಷವಿಲ್ಲದಂತಾಗುತ್ತಿತ್ತು. ಅಂತಹ ಧೀರ ಶೂರ ಪರಾಕ್ರಮ ಹೊಂದಿರುವ ಯುಗ ಪುರುಷ ಪುತ್ರನನ್ನು ನೀಡಿದಂತಹ ಮಹಾತಾಯಿಯ ಆದರ್ಶ ಪ್ರೇರಣೆ ತತ್ವಗಳನ್ನು ಇಂದಿನ ತಾಯಂದಿರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕೆಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾದ ಮೋಹನಕುಮಾರಿ ತಹಶೀಲ್ದಾರರು, ಅಧ್ಯಕ್ಷತೆಯನ್ನು ಪ್ರೀಯಾಂಕಾ ಪ್ರಕಾಶ ನಿಕ್ಕಮ ವಹಿಸಿದ್ದರು. ಈ ವಿವಿಧ ಜಿಜಾಮಾತೆಯವರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕವಿತಾ ವಿಜಯ ಚವ್ಹಾಣ, ರೋಹಿಣಿ ವಿಠ್ಠಲ ಚವ್ಹಾಣ, ಪ್ರಾಜಕ್ತಾ ರಾಹುಲ್ ಜಾಧವ, ಸೋನಾಬಾಯಿ ಸಂಕಪಾಳ, ಸುನಂದಾ ಯಾದವ ಇವರು ಮುತ್ತೈದೆಯವರಿಗೆ ಉಡಿ ತುಂಬುವ ಕಾಣಿಕೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಸಮಾಜದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.