ಲೋಕದರ್ಶನ ವರದಿ
ವಿಜಯಪುರ 18; ಪ್ರತಿಯೊಂದು ಹೆಣ್ಣು ಮಗುವಿನ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೆಚ್ಚು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಸ್.ಎಸ್.ವಿ.ವಿ ಸಂಘ ಇವರುಗಳ ಸಂಯುಕ್ತಾ ಆಶ್ರಯದಲ್ಲಿ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಶಂಕರಲಿಂಗ ಫ್ರೌಢ ಶಾಲೆ "ಆವರಣದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ" ಕಾನೂನು ಅರಿವು ಹಾಗೂ ಆರೋಗ್ಯ ಮತ್ತು ನೈರ್ಮಲ್ಯೀಕರಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಎಂಬುದನ್ನು ನಾವು ಅರಿಯಬೇಕು ಅದರಲ್ಲಿ ಹೆಣ್ಣು ಮಕ್ಕಳೆಂಬ ಕೀಳರಮೆ ನಮ್ಮಲ್ಲಿ ಇರಬಾರದು ಇಂದು ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಅವರಲ್ಲಿರುವ ಪ್ರತಿಭೆಯನ್ನು ಬಿಂಬಿಸಲು ನಾವು ಸದಾ ಕಾಲ ಅವರಿಗೆ ಪ್ರೊತ್ಸಾಹಿಸಬೇಕು ಎಂದು ಅವರು ಹೇಳಿದರು.
ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಹಾಗೂ ಅಮಾನವೀಯ ಘಟನೆಗಳ ಕುರಿತಾಗಿ ಕಳವಳ ವ್ಯಕ್ತಪಡಿಸಿದ ಅವರು ಮಹಿಳೆಯರು ಇಂದಿನ ಸಮಾಜದಲ್ಲಿ ಸಬಲೀಕರಣ ಹೊಂದುವ ಕುರಿತಾಗಿ ಪ್ರತಿಕ್ರೀಯಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯೆರಿಗೆ ಅಪಾರವಾದ ಗೌರವವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ವಿ.ವಿ ಸಂಘದ ಶಂಕರಲಿಂಗ ಫೌಢ ಶಾಲೆ ಸಮೀತಿ ಅದ್ಯಕ್ಷ ಬಿ.ಎಸ್ ಕೌಲಗಿ, ಹಾಲು ಒಕ್ಕೂಟದ ಅಧ್ಯಕ್ಷ ಸಂಬಾಜಿ ಮಿಸಾಳೆ, ಜಿ.ಪಂ ಸದಸ್ಯರಾದ ಮಧುಶ್ರೀ ಹ. ಖಂಡೇಕಾರ, ತಾ.ಪಂ ಸದಸ್ಯ ಅಣ್ಣಾರಾಯ ಬಿದರಕೋಟಿ, ಅಗರಖೇಡ ಗ್ರಾ.ಪಂ ಅಧ್ಯಕ್ಷ ವಿಠ್ಠಲಗೌಡ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿದರ್ೆಶಕ ಸಿ.ಪ್ರಸನ್ಕುಮಾರ, ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಬಿಂಗೇರಿ, ಎಸ್.ಸಿ ಮ್ಯಾಗೇರಿ, ಎಸ್.ಎಸ್.ವಿ.ವಿ ಶಿಕ್ಷಣ ಸಂಸ್ಥೆಯ ಸದಸ್ಯರು, ಶಿಕ್ಷಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕತರ್ೆಯರು, ಗ್ರಾಮ ಪಂಚಾಯತಿ ಅಧಿಕಾರಿಗಳು, ಗ್ರಾಮದ ಗುರು ಹಿರಿಯರು, ಮಕ್ಕಳು ಭಾಗವಹಿಸಿದ್ದರು.