ಲೋಕದರ್ಶನ ವರದಿ
ವಿಜಯಪುರ 02: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಕುರಿತಂತೆ ಕಾಂಗ್ರೆಸ್ ಪಕ್ಷ ಇಲ್ಲಸಲ್ಲದ ಅಪಪ್ರಚರ ಮಾಡುತ್ತಿದ್ದು, ಜನರಲ್ಲಿ ಭೀತಿ ಹುಟ್ಟಿಸುವ ಪ್ರಯತ್ನ ಮಾಡುಇತ್ತಿದೆ ಎಂದು ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ಆರೋಪಿಸಿದರು.
ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರವಿವಾರ ಪ್ರಥಮ ಬಾರಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪೌರತ್ವ ಕಾಯ್ದೆಯಿಂದ ಯಾರೂ ಕೂಡ ಭಯಪಡಬೇಕಾಗಿಲ್ಲ. ಅದು ಯಾರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಯಾವುದೇ ಸಮುದಯದವರು ಈ ಬಗ್ಗೆ ಭಯಪಡಬೇಕಗಿಲ್ಲ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ ಎಂದರು.
ಪೌರತ್ವ ಕಾಯ್ದೆಯ ಬಗ್ಗೆ ಬಿಜೆಪಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಮನೆ-ಮನೆಗೆ ತೆರಳಿ ಕರಪತ್ರ ಗಳನ್ನು ಹಂಚಿ ವಾಸ್ತವಾಂಶವನ್ನು ಜನತೆಗೆ ತಿಳಿಸುವ ಕೆಲಸ ಮಾಡುತ್ತಿದೆ. ಪೌರತ್ವ ಕಾಯ್ದೆ ಪರ ಸಹಿಸಂಗ್ರಹಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಅನೇಕರು ಸ್ವಯಂಪ್ರೇರಣೆಯಿಮದ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಹೇಳಿದರು.
ಐತಿಹಾಸಿಕ ಬಜೆಟ್ ಮಂಡನೆ:
ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಲೋಕಸಭೆಯಲ್ಲಿ ಮಂಡಿಸಿದ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಬಗ್ಗೆ ಪ್ರಸ್ತಾಪಿಸಿದ ಅವರು, ಇದೊಂದ ಜನಪರವಾದ ಬಜೆಟ್. ನವಭಾರತ ನಿಮರ್ಾಣದ ಕಲ್ಪನೆ ಇಟ್ಟುಕೊಂಡು ಐತಿಹಾಸಿಕವಾದ ಬಜೆಟ್ ಮಂಡನೆ ಮಾಡಿದ್ದಾರೆ. ಎಲ್ಲ ದೃಷ್ಟಿಕೋನಗಳನ್ನೊಳಗೊಂಡು ಎಲ್ಲರ ಹಿತ ಕಾಪಾಡುವ ಯೋಜನೆಗಳನ್ನು ರೂಪಿಸಲಾಗಿದೆ. ಕೃಷಿಯಲ್ಲಿ ಹೊಸ ಬದಲಾವಣೆ ತರಲು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಒದಗಿಸಿದ್ದಾರೆ ಎಂದರು.
ಪದಾಧಿಕಾರಿಗಳ ನೇಮಕ:
ಬಿಜೆಪಿ ಜಿಲ್ಲಾ ಘಟಕಕ್ಕೆ ಸವರ್ಾನುಮತದಿಂದ ತಮ್ಮನ್ನು ಅದ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುತ್ತೇನೆ ಎಂದು ಹೇಳಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಕಮಲ ಅರಳಲಿದೆ. ಮುಂಬರುವ ಗಾಮ ಪಂಚಾಯ್ತಿ, ತಾಕೂಕು ಹಾಗೂ ಜಿಲ್ಲಾ ಪಂಚಾಯ್ತಿ ಹಾಗೂ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಪಕ್ಷಜಯಭೇರಿ ಬಾರಿಸುವಂತೆ ಎಲ್ಲರೂ ಸೇರಿ ಪಕ್ಷವನ್ನು ಸಂಘಟಿಸುತ್ತೇವೆ ಎಂದರು.
ಪಕ್ಷದ ಜಿಲ್ಲಾ ಹಾಗು ಎಲ್ಲ ಮಂಡಲಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈ ತಿಂಗಳಾಂತ್ಯಕ್ಕೆ ಅದು ಪೂರ್ಣಗೊಳ್ಳುತ್ತದೆ. ಪಕ್ಷ ಸಂಘಟನೆಗೆ ಯಾವುದೇ ರೀತಿಯ ತೊಡಕಿಲ್ಲ. ಪಕ್ಷ ಒಂದು ಕುಟುಂಬವಿದ್ದಂತೆ. ಕುಟುಂಬದಲ್ಲಿ ಸಣ್ಣ-ಪುಟ್ಟ ಭಿನ್ನಭಿಪ್ರಾಯಗಳಿರಬಹುದು. ಮುಂದೆ ಅದು ಸರಿಹೋಗುತ್ತದೆ ಎಂದು ಅವರು ಪತ್ರಕತ್ರ್ರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪುಸ್ತತ ಬಿಡುಗಡೆ:
ಬಾಂಗ್ಲಾ ಹಿಂದುಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳನ್ನೊಳಗೊಂಡ 'ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು' ಎಂಬ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ದೇವರ ಹಿಪ್ಪರಗಿ ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ (ಸಾಸನೂರ), ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪಕ್ಷದ ಮುಖಂಡರಾದ ದಯಾಸಾಗರ ಪಾಟೀಲ, ಗೂಳಪ್ಪ ಶೆಟಗಾರ, ವಿವೇಕಾನಂದ ಡಬ್ಬಿ, ನಗರ ಬಿಜೆಪಿ ಅಧ್ಯಕ್ಷ ಮಳೂಗೌಡ ಪಾಟೀಲ, ವಿಜಯ ಜೋಶಿ, ರಾಕೇಶ ಕುಲಕಣರ್ಿ ಹಾಗೂ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.