ಲೋಕದರ್ಶನ ವರದಿ
ವಿಜಯಪುರ 17: ಜಿಲ್ಲೆಯಲ್ಲಿ 108 ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಈ ಕೂರಿತು ನೋಂದಣಿಗೆ ಸಂಬಂಧಿಸಿದಂತೆ ಎನ್.ಆಯ್.ಸಿ(ನ್ಯಾಷನಲ್ ಇಂಫಾರಮೇಟಿಕ್ ಸೆಂಟರ್) ನಿಂದ ಹೊಸ ಸಾಪ್ಟ್ವೆರ್ ಮಾಡಲಾಗಿದ್ದು ಅದರ ಮೂಲಕ ಜಿಲ್ಲಾ ಪಂಚಾಯತದಲ್ಲಿ ಸಂಬಂಧಿಸಿದ ಅಧಿಕಾರಿ, ಕೃಷಿ ಪತ್ತಿನ ಸಹಕಾರಿ ಅಧಿಕಾರಿಗಳು, ಪಿ.ಕೆ.ಪಿ.ಎಸ್ ಮುಖ್ಯ ನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ಸ್ಗಳಿಗೆ ತರಬೇತಿ ನೀಡಲಾಯಿತು.
ಸರ್ಕಾರ ತೊಗರಿ ಬೆಳೆಗೆ 6001 ರೂ ಬೆಂಬಲ ಬೆಲೆ ಈಗಾಗಲೆ ಘೋಷಿಸಿದ್ದು. ತೊಗರಿ ಬೆಳೆ ಖರೀದಿಗೆ ಹೊಸ ವೆಬ್ಸೈಟ್ ಪ್ರಾರಂಬಿಸಲಾಗಿದೆ. ತೊಗರಿ ಬೆಳೆಗಾರರ ನೋಂದಣಿ ಇದೇ ತಿಂಗಳು 31 ರ ವರೆಗೆ ನಡೆಯಲಿದ್ದು. ಸರ್ಕಾರದ ವೆಬ್ಸೈಟ್ ನಲ್ಲಿ ನೊಂದಣಿ ಮಾಡಬೇಕು. ರೈತರು ತೊಗರಿ ಖರೀದಿ ನೋಂದಣಿಗೆ ಖಡ್ಡಾಯವಾಗಿ ಫ್ರುಟ್ಕಾರ್ಡ ಐಡಿ ಅಥವಾ ಆಧಾರ ಕಾರ್ಡನ್ನು ಹತ್ತಿರದ ತೊಗರಿ ಖರೀದಿ ಕೇಂದ್ರಕ್ಕೆ ನೀಡಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯ ಸಹಾಯಕ ನಿರ್ದೇಶಕ ಛಬನೂರ ಹೇಳಿದರು.
ಫ್ರುಟ್ಕಾರ್ಡ ಐಡಿ ಇಲ್ಲದಿದ್ದಲ್ಲಿ ರೈತರು ಹತ್ತಿರದ ಆರ್ಎಸ್ಕೆ ಅಥವಾ ಸಿ.ಎಸ್.ಕೆಗೆ ಹೋಗಿ ನೋಂದಣಿ ಮಾಡಿಸಿ ಕೊಳ್ಳಬೇಕು ಎಂದರು. ತೊಗರಿ ಖರೀದಿ ಕೇಂದ್ರಗಳು ರೈತರ ನೊಂದಣಿ ಮಾಡಿಕೊಂಡು ಒಂದು ಸ್ವೀಕೃತಿ ಪತ್ರವನ್ನು ನೀಡಬೇಕು. ಅದರಲ್ಲಿ ತೊಗರಿ ಖರೀದಿಯ ದಿನಾಂಕವನ್ನು ನಮೂದಿಸಬೇಕು. ನೋಂದಣಿ ಮಾಡಿದ ರೈತರಿಗೆ ಎಸ್ಎಂಎಸ್ ಬರಲಿದ್ದು, ಒಬ್ಬ ರೈತ ಬೇರೆ ಬೇರೆ ತೊಗರಿ ಖರೀದಿ ಕೇಂದ್ರಗಳಲ್ಲಿ ನೊಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ. ಒಂದೇ ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ರೈತರ ಸಹಾಯಕ್ಕಾಗಿ ಹೊಸ ವೆಬ್ಸೈಟ ಪ್ರಾರಂಭಿಸಲಾಗಿದ್ದು ಅದರ ಸದೂಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ತರಬೇತಿ ವೇಳೆಯಲ್ಲಿ ಎನ್.ಐ.ಸಿಯ ಗೊನವಾಡ, ಫೆಡರೇಷನ್ ವ್ಯವಸ್ಥಾಪಕ ಲಿಂಗರಾಜು, ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯ ಸಹಾಯಕ ನಿರ್ದೇಶಕ ಛಬನೂರ, ಸಹಕಾರ ಇಲಾಖೆಯ ಉಪನಿಭಂದಕ ಗಂಗಾದರ ಗಚ್ಚಿ ಉಪಸ್ಥಿತರಿದ್ದರು.