ವಿಜಯಪುರ: ಆರ್ಥಿಕವಾಗಿ ಸಬಲರಾಗಲು ಕರೆ

ಲೋಕದರ್ಶನ ವರದಿ

ವಿಜಯಪುರ 19; ಜಿಲ್ಲೆಯಲ್ಲಿ ಬಿತ್ತನೆ ಮೀನು ಮರಿಗಳ ಬೇಡಿಕೆ ಹೆಚ್ಚಾಗಿರುವುದನ್ನು ನೋಡಿದರೆ, ಮೀನುಗಾರಿಕೆ ಉತ್ತುಂಗ ಸ್ಥಿತಿಯಲ್ಲಿದೆ ಎಂದು ತಿಳಿದುಬರುತ್ತದೆ. ರೈತರು ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಪ್ರಾಮಾಣದಲ್ಲಿ ವೈಜ್ಞಾನಿಕವಾಗಿ ಮೀನು ಸಾಗಾಣಿಕೆ ಮಾಡುವುದರಿಂದ ಆರ್ಥಿಕವಾಗಿ ಇನ್ನಷ್ಟು ಸಬಲರಾಗಬಹುದೆಂದು ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥರಾದ ಡಾ.ವಿಜಯಕುಮಾರ ಹೇಳಿದರು.

ನಗರ ಸಮೀಪವಿರುವ ಭೂತನಾಳದ  ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ವೈಜ್ಞಾನಿಕ ಮೀನು ಸಾಕಾಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಬರದ ಜಿಲ್ಲೆಯೆಂದೆ ಪ್ರಸಿದ್ಧವಾಗಿರುವ ವಿಜಯಪುರವು  ಪ್ರಸ್ತುತ ವರ್ಷದಲ್ಲಿ ಸಾಕಷ್ಟು ಮಳೆಯಾಗಿ ಕೆರೆ ಕಟ್ಟೆಗಳು ಮತ್ತು ಕೃಷಿ ಹೊಂಡಗಳು ಭರ್ತಿಯಾಗಿರುವುದರಿಂದ ಮೀನುಗಾರಿಕೆ ಮಾಡಲು  ರೈತರು ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು  ಉತ್ತಮ ಬೆಳವಣಿಗೆಯಾಗಿದ್ದಲ್ಲದೆ ರೈತರು ಉತ್ತಮ ಗುಣಮಟ್ಟದ ಬಿತ್ತನೆ ಮೀನು  ಮರಿಗಳನ್ನು ತಮ್ಮ ಕೊಳಗಳಲ್ಲಿ ಸಾಕಾಣಿಕೆ ಮಾಡುವುದರಿಂದ ಆಥರ್ಿಕವಾಗಿ ಸದೃಢರಾಗಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ಸಿಬ್ಬಂದಿ ವರ್ಗ ಮತ್ತು 50 ಕ್ಕೂ ಹೆಚ್ಚು ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.