ವಿಜಯಪುರ ಕೇಂದ್ರೀಯ ವಿದ್ಯಾಲಯ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ

Vijayapur Kendriya Vidyalaya begins educational tour

ವಿಜಯಪುರ ಡಿ.06: ವಿಜಯಪುರ ನಗರದ ಟಕ್ಕೆಯಲ್ಲಿರುವ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ದಿನಾಂಕ : 06-12-2024 ರಂದು ಹಮ್ಮಿಕೊಂಡ ಒಂದು ದಿನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಉಪ ಪ್ರಾಂಶುಪಾಲರಾದ ಡಾ. ಅನಾಮಿಕಾ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.  

ಡಿ.6ರಂದು ಬೆಳಿಗ್ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳ ಮೂಲಕ ವಿದ್ಯಾಲಯದ ಆವರಣದಿಂದ ಆರಂಭಗೊಂಡ ಪ್ರವಾಸದಲ್ಲಿ  9,11 ಹಾಗೂ 12ನೇ ತರಗತಿಯ 81 ವಿದ್ಯಾರ್ಥಿಗಳನ್ನು ಧಾರವಾಡದ ಐಐಟಿಗೆ ಪ್ರವಾಸ ಕರೆದುಕೊಂಡು ಹೋಗಿ,  ಐಐಟಿಯಲ್ಲಿ ಕೈಗೊಳ್ಳಲಾಗುವ ಶೈಕ್ಷಣಿಕ ಚಟುವಟಿಕೆ, ಕಂಪ್ಯೂಟರ್ ಲ್ಯಾಬ್, ಕೆಮಿಸ್ಟ್ರಿ, ಬಯೋಲಾಜಿ, ಫಿಜಿಕ್ಸ್‌ ಲ್ಯಾಬ್,  ಪ್ರಯೋಗಾಲಯ ಸೇರಿದಂತೆ ಉಪಯುಕ್ತ ಮಾಹಿತಿ ಒದಗಿಸುವ ಮೂಲಕ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಪ್ರೇರೆಪಿಸಲಾಯಿತು. 

ಶಿಕ್ಷಕರಾದ ಶಾಲೂ, ಸೀಮಾ, ತೇಜಶ್ರೀ, ಆರಾಧ್ಯ ಜೈನ್, ರಮೇಶ ಚವ್ಹಾಣ ಅವರು ಉಪಸ್ಥಿತರಿದ್ದರು ಎಂದು ಪ್ರಾಂಶುಪಾರಾದ  ಜುನ್ನಾರಾಮ್ ಅವರು ತಿಳಿಸಿದ್ದಾರೆ.