ವಿಜಯಪುರ: ಮಹಿಳೆಯರ ಬಲವರ್ಧನೆಗೆ ಸಮಾಜ ಬದಲಾವಣೆಯಾಗಬೇಕು: ಜಿಲ್ಲಾಧಿಕಾರಿ ಪಾಟೀಲ ಹೇಳಿಕೆ

ಲೋಕದರ್ಶನ ವರದಿ

ವಿಜಯಪುರ 09:ಮಹಿಳೆಯರು ಸಂಘಟಿತರಾಗಿ ಸಮಾಜದಲ್ಲಿ ಶೈಕ್ಷಣಿಕವಾಗಿ, ಆಥರ್ಿಕವಾಗಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಒಂದು ದೊಡ್ಡ ಪಾತ್ರ ವಹಿಸಬೇಕಾಗಿದೆ. ಮಹಿಳೆಯರ ಬಲವರ್ದನೆಗಾಗಿ ಸಮಾಜ ಬದಲಾವಣೆಯಾಗಬೇಕು ಎಂದು ಜಿಲ್ಲಾಧಿಕಾರಿ  ವಾಯ್ ಎಸ್ ಪಾಟೀಲ ಅವರು ಹೇಳಿದರು. 

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕು.ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತ ಮತ್ತು ಸಾರ್ವಜನಿಕ ಇಲಾಖೆ, ಪ್ರಸುತಿ ಮತ್ತು ಸ್ತ್ರೀರೋಗ ತಜ್ಞರುಗಳು ಸಂಘ, ವಿವಿಧ ನರ್ಸಿಂಗ್  ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳು ಆಶ್ರಯದಲ್ಲಿ ಆಯೋಜಿಸಿದ "ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ" ಕಾರ್ಯಕ್ರಮದ ಜನಜಾಗೃತಿ ರ್ಯಾಲಿಗೆ  ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿದರ್ೇಶನಾಲಯದ ಸಹ ನಿದರ್ೇಶಕ ಓಂಪ್ರಕಾಶ ಪಾಟೀಲ ಅವರೊಂದಿಗೆ ಜಂಟಿಯಾಗಿ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ ಮಹಿಳೆಯರು ಒಂದು ಗಡಿಯಾರ ಇದ್ದಹಾಗೆ, ಸಮಯ ಪಾಲನೆ ಜೊತೆಗೆ ಕುಟುಂಬ ಹಾಗೂ ಸಮಾಜದ ನಿರ್ವಹಣೆ ಕೂಡ ನೀಬಾಹಿಸಬಲ್ಲಳು ಹಾಗಾಗಿ ಪ್ರತಿ ವರ್ಷವು ಕೂಡಸರ್ಕಾರವು ಒಂದೊಂದು ಘೋಷಣೆ ಪ್ರಕಟಣೆ ಮಾಡುತ್ತದೆ ಆ ಉದ್ದೇಶದಿಂದ ಮಹಿಳಿಯರಿಗೆ ಶಿಕ್ಷಣ, ಉದ್ಯೋಗ, ಸಮಾನತೆ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು. ವಿಶ್ವ ಸಂಸ್ಥೆಯ ದಿನ ಮತ್ತು ಅಂತರಾಷ್ಟ್ರೀಯ ಶಾಂತಿ ದಿನ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಮಹಿಂದ್ರ ಕಾಪಸೆ, ಡಾ|| ಮುಕುಂದ ಗಲಗಲಿ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ: ಸುರೇಶ ಚವ್ಹಾಣ, ಡಾ|| ಸಂಪತ್ತ ಗುಣಾರಿ, ಡಾ|| ಜ್ಯೋತಿ ಪಾಟೀಲ, ಡಾ|| ಆಯ್ ಎಸ್ ಧಾರವಾಡಕರ, ಡಾ|| ರಾಜೇಶ್ವರಿ ಗೊಲಗೇರಿ ಪ್ರಸುತಿ ಮತ್ತು ಸ್ತ್ರೀರೋಗ ತಜ್ಞರುಗಳು ಸಂಘದ ಪದಾಧಿಕಾರಿಗಳು, ಜಿಲ್ಲೆಯ ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸುರೇಶ ಹೊಸಮನಿ ಮತ್ತು ಡಿ.ಕೆ.ತೇಲಿ, ರಾಮು ಹೊನವಾಡ, ಕುಮಾರ ರಾಠೋಡ, ರಮೇಶ ಅರಕೇರಿ, ಉಮೇಶ ಗಂಗರಗೊಂಡ, ಧರೆಪ್ಪ ಕಡಬಿ ಭಾಗವಹಿಸಿದ್ದರು.