ವಿಜಯಪುರ: ವಿಜಯಪುರವನ್ನು ಮಾದರಿ ನಗರವನ್ನಾಗಿಸಲು ಯತ್ನ

ಲೋಕದರ್ಶನ ವರದಿ

ವಿಜಯಪುರ 21: ಕರ್ನಾಟಕದಲ್ಲಿಯೇ ವಿಜಯಪುರವನ್ನು ಮಾದರಿ ನಗರವನ್ನಾಗಿ ಮಾಡುವ ಉದ್ದೇಸಿಸಲಾಗಿದ್ದು ಶಿಕ್ಷಣ, ಸ್ವಚ್ಚತೆ, ಆರೋಗ್ಯ ಹೀಗೆ ನಾನಾ ಅಭಿವೃದ್ಧಿ ಕೆಸಲಗಳನ್ನು ಕೈಗೊಳ್ಳಲಾಗುತ್ತಿದೆ.ಎಲ್ಲ ಸರ್ಕಾರಿ-ಶಾಲಾ ಕಾಲೇಜುಗಳನ್ನು ಹಂತ ಹಂತವಾಗಿ ನವೀಕರಿಸಲಾಗುತ್ತಿದೆ  ನಗರದ ಗಾಂಧೀಚೌಕ ಹೆಣ್ಣುಮಕ್ಕಳ ಶಾಲೆಯನ್ನು ಸ್ಥಳಾಂತರಿಸಿ ಅಲ್ಲಿ ಪೂರ್ತಿ ಅಂಡರ್ಪಾಸ್ ಮಾಡಲಾಗುತ್ತಿದೆ ಇದರಿಂದ ವಿದ್ಯಾರ್ಥಿಗಳಿಗು ಸಾಕಷ್ಟು ಅನಕೂಲತೆಗಳಾಗಲಿವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.

ಸರಕಾರಿ ಪ್ರಥಮ ದರ್ಜೆ  ಮಹಿಳಾ ಕಾಲೇಜು ಹಾಗೂ ಸರಕಾರಿ ಪ್ರಥಮ ದರ್ಜೆ  ಕಾಲೇಜು ನವಬಾಗ 2019-20 ನೇ ಸಾಲಿನ ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಿಸಿ ಮಾತನಾಡಿದ ಅವರು, ವಿದ್ಯಾಥರ್ಿಗಳು ಸ್ವಚ್ಚತೆಗೆ ಆದ್ಯತೆ ನೀಡಬೇಕು, ಶಾಲೆಯ ಸುತ್ತಮುತ್ತಲಿನ ಗಿಡಮರಗಳಿಗೆ ನೀರುಣಿಸಿ ಪರಿಸರ ರಕ್ಷಣೆಗೆ ಕೈ ಜೊಡಿಸಬೇಕು. ಎಲ್ಲ ವರ್ಗದಲ್ಲಿಯೂ ಸಮಾನತೆ ತರುವುದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಮೂಲ ಆಶಯವಾಗಿತ್ತು ಅದರಂತೆ ಇಂದು ಎಲ್ಲಾ ಸರ್ಕಾರಿ ಯೋಜನೇಗಳನ್ನು ಎಲ್ಲ ವರ್ಗದ ವಿದ್ಯಾಥರ್ಿಗಳಿಗೆ ತಲುಪಿಸಲಾಗುತ್ತಿದೆ ಅದರಂತೆಯೇ ಈ ಲ್ಯಾಪ್ಟಾಪ್ ವಿತರಣೆ ಯೋಜನೆಯೂ ಒಂದಾಗಿದೆ ವಿದ್ಯಾರ್ಥಿಗಳು ತಂತ್ರಜ್ಞಾನದ ಯುಗದಲ್ಲಿ ಹೊಸದನ್ನು ಸಂಶೋಧಿಸಲು ಹಾಗೂ ಹೆಚ್ಚಿನ ಕಲಿಕೆಗೆ, ಉನ್ನತ ವ್ಯಾಸಂಗಕ್ಕೆ ಸಹಕಾರಿಯಾಗಲಿ.ಸರ್ಕಾರ ನೀಡುತ್ತಿರುವ ಎಲ್ಲ ಯೋಜನೆಗಳನ್ನು ಸಮಾಜದ ಎಲ್ಲ ಸಮೂದಾಯದ ವಿದ್ಯಾಥರ್ಿಗಳು ಪಡೆದುಕೊಂಡು ಉತ್ತಮ ವಿದ್ಯಾರ್ಜನೆ ಪಡೆದುಕೊಂಡು ದೇಶದ ಸಂಪತ್ತಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಕಾಲೇಜಿನ ದೈಹಿಕ ಶಿಕ್ಷಕರಾದ   ರಾಜಶೇಖರ ಬೆನಕನಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಕರ್ಾರ ರಾಜ್ಯ ಸರ್ಕಾರ ರಾಜ್ಯಾದ್ಯಂತ 140 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಹಂಚಿಕೆ ಮಾಡುತ್ತಿದ್ದು ಸರಕಾರಿ ಪ್ರಥಮ ದರ್ಜೆ  ಮಹಿಳಾ ಕಾಲೇಜಿಗೆ 276 ಹಾಗೂ ಸರಕಾರಿ ಪ್ರಥಮ ದರ್ಜೆ  ಕಾಲೇಜು ನವಬಾಗ ವಿದ್ಯಾರ್ಥಿಗಳಿಗೆ 840 ಲ್ಯಾಪ್ಟಾಪ್ ಗಳು ಬಂದಿವೆ ವಿತರಿಸಿದ ಲ್ಯಾಪ್ಟಾಪ್ ಕೇವಲ ಮನೆಯಲ್ಲಿಡದೆ ಸರಿಯಾದ ರೀತಿಯಲ್ಲಿ ಸದ್ಬಳಿಕೆಯಾಗಲಿ ಇದರಿಂದ ಎಲ್ಲ ವಿದ್ಯಾರ್ಥಿಗಳ ಜ್ಞಾನವೃದ್ಧಿಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಕಾಲೇಜು ಅಭಿವೃದ್ಧಿ ಸಮೀತಿ ಸದಸ್ಯರು ಉಪಸ್ಥಿತರಿದ್ದರು.