ಲೋಕದರ್ಶನ ವರದಿ
ವಿಜಯಪುರ 09: ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತದ ಜಾನಪದ ಸಂಸ್ಕೃತಿ ವಿರೂಪಗೊಳ್ಳುತ್ತಿದೆ. ವಿಶ್ವಕ್ಕೆ ಮಾದರಿಯಾದ ಜಾನಪದ ಸಂಸ್ಕೃತಿ ಉಳಿಸಬೇಕಾಗಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ಜಾವೀದ ಜಮಾದಾರ ಅಭಿಪ್ರಾಯ ಪಟ್ಟರು.
ವಿಜಯಪುರ ನಗರದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ಮತ್ತು ವಿಜಯಪುರ ಜಿಲ್ಲಾ ಘಟಕ ಏರ್ಪಡಿಸಿದ ನೂರು ಜನ ಕಲಾವಿದರಿಗೆ ವಸ್ತ್ರದಾನ ಸಮಾರಂಭದಲ್ಲಿ ಕಲಾವಿದರಿಗೆ ವಸ್ತ್ರದಾನ ಮಾಡಿ ಮಾತನಾಡಿದ ಅವರು, ಸರಕಾರ ಮಾಡದ ಕೆಲಸವನ್ನು ಕನ್ನಡ ಜಾನಪದ ಪರಿಷತ್ ಮಾಡುತ್ತಿದೆ ಎಂದರು.
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಸರಕಾರ ಕಲಾವಿದರಿಗೆ ಮಾಶಾಸನ ಹೆಚ್ಚಿಸಿ ಕಲಾವಿದರನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್.ಪಾಟೀಲ ಮಾತನಾಡಿ, ಕನ್ನಡ ಜಾನಪದ ಪರಿಷತ್ತು ಈ ಜಿಲ್ಲೆಯಲ್ಲಿ ಕಲಾವಿದರನ್ನು ಗುರುತಿಸಿ ಗೌರವಿಸುವ ಮತ್ತು ಬೆಳೆಸುವ ಕೆಲಸ ಮಾಡುತ್ತಿದೆ. ಸಕರ್ಾರ ಮತ್ತು ಸಮಾಜ ನಮ್ಮೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಎಸ್.ಜಿ. ಲೋಣಿ, ತಿಕೋಟಾ ತಾಲೂಕಾಧ್ಯಕ್ಷ ಎನ್.ಎಮ್. ಕಲಘಟಗಿ, ಕಲಾವಿದ ಸುರೇಶ ಜೋಶಿ ನಿಡೋಣಿ ಮಾತನಾಡಿದರು.
ಮುದ್ದೇಬಿಹಾಳ ತಾಲೂಕಿನ ಎಲ್ಲ ಗ್ರಾಮಗಳ ಕಲಾವಿದರ ಸಮೀಕ್ಷೆ ನಡೆಸಿದ ಕ.ಜಾ.ಪ. ಮುದ್ದೇಬಿಹಾಳ ಅಧ್ಯಕ್ಷ ಎ.ಆರ್. ಮುಲ್ಲಾ ಇವರನ್ನು ರಾಜ್ಯ ಘಟಕದ ಪರವಾಗಿ ಸನ್ಮಾನಿಸಲಾಯಿತು.
95ಜನ ಜಿಲ್ಲೆಯ ವಿವಿಧ ಜಾನಪದ ಕಲಾವಿದರಿಗೆ ವಸ್ತ್ರದಾನ ಮಾಡಲಾಯಿತು. ಜೊತೆಗೆ ಅನೇಕ ತಂಡಗಳಿಂದ ಕಲಾ ಪ್ರದರ್ಶನ ನಡೆಸಲಾಯಿತು.
ಜಿಲ್ಲಾ ಕಾರ್ಯದಶರ್ಿ ಡಾ. ರಮೇಶ ತೇಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘಟನಾ ಕಾರ್ಯದಶರ್ಿ ಪುಂಡಲೀಕ ಮುರಾಳ ಸ್ವಾಗತಿಸಿದರು. ಜಿಲ್ಲಾ ಸದಸ್ಯ ಎಮ್.ಪಿ. ಭೈರಜಿ ನಿರೂಪಿಸಿದರು. ಇಂಡಿ ತಾಲೂಕಾಧ್ಯಕ್ಷ ಆರ್.ವಿ. ಪಾಟೀಲ ವಂದಿಸಿದರು.